ಜು.೨೭ರಿಂದ ಸಾಗರ ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ

470

ಸಾಗರ : ಸೋಮವಾರದಿಂದ ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಿಕೆ ಖರೀದಿ ಪ್ರಾರಂಭ ಮಾಡಲಾಗುತ್ತದೆ ಎಂದು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬಸವರಾಜ್ ತಿಳಿಸಿzರೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಮಾರಾಟ ಭವನದಲ್ಲಿ ಅಡಿಕೆ ವರ್ತಕರ ಸಂಘದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಗರದಲ್ಲಿ ಅಡಿಕೆ ಖರೀದಿ ಪ್ರಾರಂಭ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಒತ್ತಾಯಿಸಿ ದ್ದರು. ಆದರೆ ಅಡಿಕೆ ವರ್ತಕರ ಸಣ್ಣಪುಟ್ಟ ಪ್ರಶ್ನೆಗಳು ನಿವಾರಣೆಯಾಗು ವವರೆಗೂ ಅಡಿಕೆ ಖರೀದಿ ಪ್ರಾರಂಭ ಮಾಡಲು ಹಿಂದೇಟು ಹಾಕುತ್ತಿzರೆ ಎಂದರು.
ಗುರುವಾರ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧ ಅಡಿಕೆ ದಲಾಲರು, ಸಹಕಾರಿ ಸಂಸ್ಥೆಗಳು ಮತ್ತು ವರ್ತಕರ ಸಭೆ ಕರೆದಿzರೆ. ಈ ಸಭೆಯಲ್ಲಿ ಎಪಿಎಂಸಿಗೆ ಪೂರಕವಾದ ನಿರ್ಣಯ ಕೈಗೊಳ್ಳಬಹುದು ಎನ್ನುವ ಆಶಾಭಾವನೆ ಇದೆ. ಬೆಂಗಳೂರಿನಲ್ಲಿ ಏನೇ ತೀರ್ಮಾನವಾದರೂ ಸಾಗರ ದಲ್ಲಿ ಸೋಮವಾರ ಅಡಿಕೆ ಖರೀದಿ ಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಡಿಕೆ ವರ್ತಕ ಅಶ್ವಿನಿಕುಮಾರ್ ಮಾತನಾಡಿ, ಅಡಿಕೆ ಖರೀದಿಯನ್ನು ಗುರುವಾರದಿಂದ ಪ್ರಾರಂಭ ಮಾಡುವಂತೆ ಎಪಿಎಂಸಿ ಅಧ್ಯಕ್ಷರು ಮನವಿ ಮಾಡಿದ್ದರು. ಆದರೆ ಗುರುವಾರ ರಾಜ್ಯದಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಸಹ ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಡಿಕೆ ವರ್ತಕರ ಸಂಘ ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಸೋಮವಾರದಿಂದ ಅಧಿಕತವಾಗಿ ಅಡಿಕೆ ಖರೀದಿ ಪ್ರಾರಂಭಿಸಲಾಗುತ್ತದೆ. ಇದಕ್ಕೆ ಸಹಕಾರ ಸಂಸ್ಥೆಗಳು, ಎಪಿಎಂಸಿ ಮತ್ತು ಅಡಿಕೆ ಬೆಳೆಗಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವೆಂಕಟೇಶ್, ಪ್ರಮುಖರಾದ ಬಿ.ಎಚ್. ಲಿಂಗರಾಜ್, ಆರೀಫ್ ಆಲಿಖಾನ್, ಶಂಕರ್ ಅಳ್ವಿಕೋಡಿ, ಮಂಜಪ್ಪ ಇನ್ನಿತರರು ಹಾಜರಿದ್ದರು.