ಜೀರೋ ಟ್ರಾಫಿಕ್ನಲ್ಲಿ ಮಗುವನ್ನು ಬೆಂಗಳೂರಿಗೆ ರವಾನೆ

926

 

ಶಿವಮೊಗ್ಗ: ಕೊರೋನ ಹಿನ್ನಲೆ ಯಲ್ಲಿ ಲಾಕ್ ಡೌನ್ ಜರಿಯಲ್ಲಿ ದ್ದರೂ ಸಹ ಎರಡು ತಿಂಗಳ ಮಗುವೊಂದನ್ನ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿದೆ. ಮಗುವನ್ನ ಸಾಗಿಸು ವಲ್ಲಿ ಸಿಪಿಐ ವಸಂತ್ ಕುಮಾರ್ ಹೃದಯವಂತಿಕೆ ಮೆರೆದಿದ್ದಾರೆ.

ನಗರದ  ಏಂಜಲ್ ಮ್ಯಾಕ್ಸ್ ಆಸ್ಪತ್ರೆಯಿಂದ  ಜಿರೋ ಟ್ರಾಫಿಕ್‌ನಲ್ಲಿ  ಎರಡು ತಿಂಗಳ ಹೆಣ್ಣು  ಮಗು  ಬೆಂಗಳೂರಿಗೆ ರವಾನಿಸಲಾಗಿದೆ. ಹೃದಯ ಕಾಯಿಲೆಯಿಂದ ಬಳಲುತ್ತಿ ರುವ ಮಗುವಿಗೆ ಬೆಂಗಳೂರಿನಲ್ಲಿ ಈಗಾಗಲೇ ಮೂರು ಬಾರಿ ಶಸ್ತ್ರ  ಚಿಕಿತ್ಸೆ  ನಡೆಸಲಾಗಿದೆ. ಕಳೆದ ಒಂದು ವಾರದ ಹಿಂದೆಯಷ್ಟೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ    ಚಿಕಿತ್ಸೆ  ಪಡೆದು  ಡಿಸ್ಚಾರ್ಜ್  ಮಾಡಲಾಗಿತ್ತು. ಮಗುವಿನ ಹೃದಯ ದಲ್ಲಿ ರಂಧ್ರವಾಗಿದ್ದು ರಕ್ತನಾಳ ಬ್ಲ್ಯಾಕ್ ಆಗಿತ್ತು.

ಈ ಹಿನ್ನಲೆಯಲ್ಲಿ ಮಗುವನ್ನ ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಉಸಿರಾಟ ದಲ್ಲಿ ತೊಂದರೆ ಉಂಟಾಗಿದ್ದರಿಂದ ನಿನ್ನೆ ಮಧ್ಯಾಹ್ನ ಏಂಜಲ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ಅಲ್ಲಿನ ವೈದ್ಯರು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ಚಿಕ್ಕಮಗಳೂರು  ಜಿಲ್ಲೆ ಕೊಪ್ಪ ತಾಲೂಕಿನ  ಜಯಪುರ ನಿವಾಸಿ ಇಸ್ಮಾಯಿಲ್  ಮತ್ತ  ತಶ್ರತ್  ದಂಪತಿಗಳ ಎರಡನೇ ಮಗು ಇದಾಗಿದೆ. ಚನ್ನಗಿರಿ ಚಿತ್ರದುರ್ಗ  ತುಮಕೂರು ಮಾರ್ಗವಾಗಿ  ಬೆಂಗಳೂರುಗೆ  ಆಂಬ್ಯುಲೆನ್ಸ್ ನಲ್ಲಿ ತೆರಳಲು ಪೊಲೀಸರು ಅನುಮತಿ ನೀಡಿದ್ದಾರೆ.