ಜಿಲ್ಲೆಯ ೨೬೦ ಮದ್ಯ ಅಂಗಡಿಗಳ ಭೌತಿಕ ಮತ್ತು ಪುಸ್ತಕ ದಾಸ್ತಾನುಗಳ ತಪಾಸಣೆ ಆರಂಭ

529

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೊಗ್ಗ: ನಗರದಲ್ಲಿ ಮದ್ಯ ಮಾರಾಟ ಮಳಿಗೆಗಳಿಗೆ (ಮದ್ಯ ಸನ್ನದು) ಅಬಕಾರಿ ಇಲಾಖೆಯವರು ಭೇಟಿ ನೀಡಿ ಭೌತಿಕ ದಾಸ್ತಾನು ಮತ್ತು ಪುಸ್ತಕ ದಾಸ್ತಾನುಗಳ ತಪಾಸಣೆ ನಡೆಸಿದ್ದಾರೆ.
ಮದ್ಯ ಸನ್ನದುಗಳೆಂದರೆ ಬಾರ್, ಮದ್ಯದ ಕೌಂಟರ್, ಎಂಎಸ್ ಐಎಲ್ ಎಲ್ಲಾ ರೀತಿಯ ಮದ್ಯ ಮಾರಾಟಗಳ ಕೇಂದ್ರಗಳಲ್ಲಿ ಕೊರೋನ ಹಿನ್ನಲೆಯಲ್ಲಿ ಕೇಂದ್ರಗಳನ್ನ ಕ್ಲೋಸ್ ಮಾಡುವ ಸಂದರ್ಭದಲ್ಲಿ ಉಳಿದುಕೊಂಡಿರುವಂತಹ ಮದ್ಯಗಳ ದಾಸ್ತಾನುಗಳು ಪುಸ್ತಕದಲ್ಲಿ ಸರಿಯಾಗಿ ಬರೆಯಲಾಗಿದೆಯಾ ಎಂದು ನಡೆಸುವ ತಪಾಸಣೆಯನ್ನೇ ಭೌತಿಕ ಮತ್ತು ಪುಸ್ತಕ ದಾಸ್ತಾನುಗಳ ತಪಾಸಣೆ ಎಂದು ಕರೆಯಲಾಗುತ್ತದೆ.
ಈ ಕಾರ್ಯವನ್ನ ಅಧಿಕಾರಿಗಳು ಮೇ೧ರ ಬೆಳಿಗ್ಗೆಯಿಂದ ಜಿಲ್ಲೆಯಾಧ್ಯಂತ ನಡೆಸುತ್ತಿದ್ದಾರೆ. ಒಂದು ವೇಳೆ ಪುಸ್ತಕ ಮತ್ತು ಭೌಧಿಕ ದಾಸ್ತಾನುಗಳ ನಡುವೆ ವ್ಯತ್ಯಾಸ ಕಂಡುಬಂದರೆ ಕ್ರಮ ಜರುಗಿಸಲಾಗುವುದು. ಒಟ್ಟು ಸಿಎಲ್-೨ ಮತ್ತು ಸಿಎಲ್-೯ ಕೌಂಟರ್‌ಗಳಿಗೆ ಸರ್ಕಾರ ಮುಂದಿನ ಎರಡು ದಿನಗಳಲ್ಲಿ ತೆರೆಯಲು ಅನುಮತಿ ನೀಡಲಾಗುವುದು.
ಈ ಹಿನ್ನೆಲೆಯಲ್ಲಿ ದಾಸ್ತಾನುಗಳ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ೨೬೦ ಸಿಎಲ್೨ ಮತ್ತು ಸಿಎಲ್-೯ ಕೌಂಟರ್ ಗಳ ತಪಾಸಣೆ ನಡೆಸಲಾಗುತ್ತಿದ್ದು ಇಂದಿನವರೆಗೂ ೬೦ ಕೌಂಟರ್‌ಗಳ ತಪಾಸಣೆ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಈ ಎಲ್ಲಾ ಅಂಗಡಿಗಳ ತಪಾಸಣೆ ಮುಗಿಸಲಾಗುವುದು ಎಂದು ಅಬಕಾರಿ ಡಿಸಿ ಕ್ಯಾ.ಅಜಿತ್ ಕುಮಾರ್ ತಿಳಿಸಿದ್ದಾರೆ.
೨೬೦ ಅಂಗಡಿಗಳು ಮೇ ೪ ರಿಂದ ತೆರೆಯಲಿದ್ದು ವ್ಯಾಪಾರ ನಡೆಸಲಿವೆ. ಕೋರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಈ ಎಲ್ಲ ಅಂಗಡಿಗಳು ವಿತ್ ಕಂಡಿಷನ್ ತೆರೆಯಲು ಅಬಕಾರಿ ಡಿಸಿ ಕ್ಯಾ.ಅಜಿತ್ ಕುಮಾರ್ ಸೂಚಿಸಿದ್ದಾರೆ.
ಕಂಡಿಷನ್ ಹೀಗಿವೆ:
ಮದ್ಯದಂಗಡಿಯಲ್ಲಿ ಮಾಲೀಕರ ಜೊತೆ ಇಬ್ಬರು ಅಥವಾ ಮೂರು ಸಿಬ್ಬಂದಿ ಮಾತ್ರ ಇರಬೇಕು.
ಮದ್ಯ ಮಾರಾಟದ ವೇಳೆ ಭದ್ರತೆಗೆ ಇಬ್ಬರು ಸಿಬ್ಬಂದಿ ನಿಯೋಜಿಸಬೇಕು ಮತ್ತು ಅಂಗಡಿ ಮುಂದೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಬೇಕು.
ಮಳಿಗೆಯಲ್ಲಿ ಐವರು ಗ್ರಾಹಕರು ಮಾತ್ರ ಇರಬೇಕು. ಅವರುಗಳ ಸಾಮಾಜಿಕ ಅಂತರ ೬ ಅಡಿಗಿಂತಲೂ ಕಡಿಮೆ ಇರಬಾರದು.
ಮದ್ಯ ಮಾರಾಟ ಮಾಡುವ ಸಿಬ್ಬಂದಿಗಳು ಕಡ್ಡಾಯವಾಗಿ ಮಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು.
ಬೆಳಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆವರೆಗೆ ಮದ್ಯದಂಗಡಿ ಕಾರ್ಯನಿರ್ವಹಿಸಬೇಕು.
ಒಬ್ಬ ವ್ಯಕ್ತಿಗೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಮದ್ಯ ಮಾರಾಟ ಮಾಡುವಂತಿಲ್ಲ.
ಅಂಗಡಿಯ ಹೊರಭಾಗದಲ್ಲಿ ೫ ಜನರಿಗಿಂತಲೂ ಹೆಚ್ಚು ಜನ ಸೇರದಂತೆ ನಿಗಾ ವಹಿಸಬೇಕು.
ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಮದ್ಯ ಹೊರತು ಬೇರೆ ಯಾವುದೇ ವಸ್ತುವನ್ನು ಮಾರಾಟ ಮಾಡುವಂತಿಲ್ಲ.
ಕರ್ನಾಟಕ ಅಬಕಾರಿ ಕಾಯ್ದೆ ನಿಯಮಗಳನ್ನು ಕೂಡ ಪಾಲಿಸಬೇಕು.
ಇಲಾಖೆ ಅಧಿಕಾರಿಗಳು ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.