ಜಿಲ್ಲೆಯ ಮೂರು ಸ್ಥಳಗಳಲ್ಲಿ ಕೊರೋನಾ ಲಸಿಕೆ ನೀಡಿಕೆಗೆ ಪೂರ್ವಭಾವಿ ಡ್ರೈರನ್

507

ಶಿವಮೊಗ್ಗ: ಜಿಲ್ಲೆಯ ಮೂರು ಕಡೆಗಳಲ್ಲಿ ಇಂದು ಕೊರೋನಾ ಲಸಿಕೆ ನೀಡಿಕೆಗೆ ಪೂರ್ವಭಾವಿಯಾಗಿ ಡ್ರೈರನ್ ನಡೆಸಲಾಯಿತು.
ಶಿವಮೊಗ್ಗದ ಮೆಗ್ಗಾನ್ ಆಸ್ರತ್ರೆ, ಶಿಕಾರಿಪುರದ ತಾಲ್ಲೂಕು ಆಸ್ಪತ್ರೆ, ಭದ್ರಾವತಿ ತಾಲ್ಲೂಕಿನ ಅಂತರಗಂಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಸಲಾಯಿತು. ಮೂರು ಕೇಂದ್ರಗಳಿಂದ ಒಟ್ಟು ೭೫ ಮಂದಿ ಭಾಗಿಯಾಗಿದ್ದರು.
ಆರಂಭಿಕವಾಗಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ಸೇರಿದಂತೆ ಫ್ರಂಟ್ ಲೈನ್ ವರ್ಕರ್‍ಸ್‌ಗೆ ಲಸಿಕೆ ನೀಡುವ ಪೂರ್ವಾಭ್ಯಾಸ ನಡೆಸಲಾಯಿತು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮೆಗ್ಘಾನ್ ಆಸ್ಪತ್ರೆಗೆ ಭೇಟಿ ನೀಡಿ ಡ್ರೈರನ್ ಕಾರ್ಯಚಟುವಟಿಕೆ ಪರಿಶೀಲಿಸಿದರು.
ಮಾರ್ಗಸೂಚಿಗಳೊಂದಿಗೆ ಡ್ರೈರನ್ ನಡೆಸಲಾಗಿದೆ.
ಡ್ರೈರನ್‌ಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂರು ಕೊಠಡಿಯನ್ನು ಕಾಯ್ದಿರಿಸಲಾಗಿತ್ತು. ಮೊದಲನೇ ಕೊಠಡಿಯಲ್ಲಿ ಲಸಿಕೆ ಪಡೆಯಲು ಬಂದವರ ಮಾಹಿತಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವ ಕಾರ್ಯ ನಡೆಸಲಾಯಿತು. ೨ನೇ ಕೊಠಡಿಯಲ್ಲಿ ಫಲಾನುಭವಿ ಗಳಿಗೆ ಲಸಿಕೆ ನೀಡಿ, ಮೂರನೇ ಕೊಠಡಿಯಲ್ಲಿ ಲಸಿಕೆ ಪಡೆದವರಿಗೆ ಕೆಲಸಮಯ ವಿಶ್ರಾಂತಿಗೆ ಸಲಹೆ ನೀಡಿ, ಪರೀಕ್ಷಿಸಲಾಗುವುದು.
ಮೆಗ್ಘಾನ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಜಿ.ಪಂ. ಸಿಇಓ ಎಂ.ಎಲ್. ವೈಶಾಲಿ, ಆರೋಗ್ಯಾಧಿಕಾರಿ ಡಾ| ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಮೊದಲಾದವರಿದ್ದರು.