ಜಿಲ್ಲೆಯಲ್ಲಿ ತಗ್ಗಿದ ಪಾಸಿಟಿವ್ ಪ್ರಕರಣಗಳ ಸಂಖ್ಯೆ

463

ಶಿವಮೊಗ್ಗ: ಸೆ.೬ರಂದು ಜಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕುಗ್ಗಿದ್ದು, ಕೇವಲ ೧೨೫ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಏಕೆಂದರೆ ಕೊರೋನ ಪರೀಕ್ಷೆಯನ್ನ ಕಡಿಮೆ ನಡೆಸಿದ ಪರಿಣಾಮ ಪಾಸಿಟಿವ್ ಪ್ರಕರಣಗಳು ತಗ್ಗಿರಬಹುದು ಎಂದು ಹೇಳಲಾಗುತ್ತಿದೆ.
ಜಿಯಲ್ಲಿ ಕೇವಲ ೧೨೫ ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ ೯೩೧೯ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಭಾನುವಾರ ಮೂವರು ಸೋಂಕಿತರು ಸಾವುಕಂಡಿದ್ದು, ಇದರಿಂದ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೧೫೮ಕ್ಕೇರಿದೆ. ಇದುವರೆಗೂ ೧೫೦೦ ಕ್ಕೂ ಹೆಚ್ಚು ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇಂದು ಕೇವಲ ೫೨೫ ಜನರಿಗೆ ಪರೀಕ್ಷೆ ಒಳಪಡಿಸಲಾಗಿದೆ. ಇದರ ಪರಿಣಾಮ ೧೨೫ ಜನರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿವೆ. ೬೪೩ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ.
ಜಿಯಲ್ಲಿ ೯೩೧೯ ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿಯಲ್ಲಿ ಪ್ರಕಟವಾಗಿದೆ. ಇಂದು ೧೫೫ ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್‌ನಿಂದ ಬಿಡುಗಡೆಗೊಂಡಿzರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ ೬೯೫೩ಕ್ಕೇರಿದೆ. ೧೮೦ ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೧೯೫ ಜನ ಕೊರೋನ ಕೇರ್ ಸೆಂಟರ್ ನಲ್ಲಿ, ೨೭೩ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, ೧೪೩೪ ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿzರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆ ಯಲ್ಲಿ ೬೫ ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ ೨೧೪೭ ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್‌ಗಳು ಸಹ ಹೆಚ್ಚಾಗಿವೆ. ಶನಿವಾರದವರೆಗೆ ೪೦೩೯ ಕಂಟೈನ್ಮೆಂಟ್ ಜೋನ್‌ಗಳಿದ್ದ ಜಿಯಲ್ಲಿ ಭಾನುವಾರ ಸಹ ೪೦೩೯ ಕಂಟೈನ್ಮೆಂಟ್ ಜೋನ್‌ಗಳೇ ಇವೆ. ೧೩೯೫ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು ೧೩೯೫ ರಷ್ಟೇ ಇದೆ ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕ ವಾರು ಸೋಂಕಿತರು:
ಶಿವಮೆಗ್ಗ ನಗರ ಮತ್ತು ತಾಲೂಕಿನಲ್ಲಿ- ೮೪ ಭದ್ರಾವತಿಯಲ್ಲಿ-೯, ಶಿಕಾರಿಪುರ-೧೬, ತೀರ್ಥಹಳ್ಳಿ-೧೦, ಸಾಗರದಲ್ಲಿ ೧, ಹೊಸನಗರದಲ್ಲಿ-೨ ಹಾಗೂ ಸೊರಬದಲ್ಲಿ ಶೂನ್ಯ ಪ್ರಕರಣಗಳು ಪತ್ತೆಯಾದರೆ, ಇತರೆ ಜಿಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ೩ ಜನ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.