ಜಿಲ್ಲೆಯಲ್ಲಿ ಏರುಗತಿಯತ್ತ ಕೊರೋನ ೨ನೇ ಅಲೆ: ಸದ್ದಿಲ್ಲದೇ ಅರ್ಧ ಶತಕ ಬಾರಿಸಿದ ಕೊರೋನ

799

ಶಿವಮೊಗ್ಗ: ಏ.೭ರಂದು ೩೩ ಜನರ ಹೆಗಲೇರಿದ್ದ ಕಿಲ್ಲರ್ ಕೊರೋನ ೮ರ ನಿನ್ನೆ ಜಿಯಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಜಿಲ್ಲಾಡಳತಕ್ಕೆ ಎಚ್ಚರಿಕೆಯ ಮುನ್ಸೂಚನೆ ನೀಡಿದೆ.
ಸುಮಾರು ೫೦ ಮಂದಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದ್ದು, ೨೪೩೬ ಜನರಿಗೆ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದರು. ಇವರಲ್ಲಿ ೨೦೫೯ ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗೂ ಸೋಂಕಿ ನಿಂದ ಸಾವನ್ನಪ್ಪಿರುವ ಸಂಖ್ಯೆ ೩೫೦ಕ್ಕೇರಿದೆ.
೩೩ ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿzರೆ. ೯೬ ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿzರೆ. ೩೯ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ೧೯೭ ಜನ ಮನೆಯಲ್ಲಿಯೇ ಐಸೋಲೇಷನ್ ಆಗಿzರೆ. ಜಿಲ್ಲೆಯಲ್ಲಿ ಒಟ್ಟು ೩೩೨ ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾ ಗಿದೆ. ೪೬೮ ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್‌ಗೆ ಒಳಪಡಿಸಲಾಗಿದ್ದು, ೯ ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಬಂದಿದೆ. ಪರೀಕ್ಷೆಗೊಳಪಟ್ಟ ೪ ಜನ ಸಿಬ್ಬಂದಿಗಳಲ್ಲಿ ಯಾರಿಗೂ ಕೊರೋನ ಪಾಸಿಟಿವ್ ಬಂದಿಲ್ಲ ಎಂದು ಬುಲಿಟಿನ್ ತಿಳಿಸಿದೆ.
ತಾಲೂಕವಾರು
ಸೋಂಕಿತರ ವಿವರ:
ಶಿವಮೊಗ್ಗ ತಾಲೂಕು ಮತ್ತು ನಗರದಲ್ಲಿ ೧೬ ಜನರಿಗೆ ಪಾಸಿಟಿವ್ ಬಂದಿದೆ. ಭದ್ರಾವತಿಯಲ್ಲಿ ೮, ತೀರ್ಥಹಳ್ಳಿಯಲ್ಲಿ-೬, ಹೊಸನಗರ -೪, ಸಾಗರದಲ್ಲಿ -೧೧, ಸೊರಬ ಮತ್ತು ಶಿಕಾರಿಪುರದಲ್ಲಿ ತಲಾ ೨, ಹೊರಜಿಯಿಂದ ಬಂದ ಓರ್ವರಲ್ಲಿ ಕೊರೋನ ಪಾಸಿಟಿವ್ ಬಂದಿದೆ.
ಎಚ್ಚರಿಕೆಯ ಗಂಟೆ:
ಶಿವಮೊಗ್ಗ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಸದ್ದಿಲ್ಲದೇ ಏರಿಕೆ ಕಂಡಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆಗಳಿವೆ.
ಅತ್ತ ರಾಜ್ಯ ಸರ್ಕಾರ ಈವರೆಗೂ ಕೊರೋನಾ ಕಂಟ್ರೋಲ್‌ಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದೂ ಕೂಡ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.