ಜಿಲ್ಲೆಯಲ್ಲಿ ಇಳಿಮುಖವಾಗುತ್ತಿರುವ ಸೋಂಕಿತರ ಸಂಖ್ಯೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ

422

ಶಿವಮೊಗ್ಗ: ಸೆ.೨೯ರಂದು ಜಿಯಲ್ಲಿ ೩೩೭ ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು ಪಾಸಿಟಿವ್ ಸಂಖ್ಯೆ ೧೪೭೮೯ ಎಂದು ಜಿ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಕೊರೋನ ಪರೀಕ್ಷೆ ಹೆಚ್ಚಾಗುತ್ತಿದ್ದರೂ ಕೊರೋನ ಪಾಸಿಟಿವ್ ಸಂಖ್ಯೆ ಕಡಿಮೆ ಬರುತ್ತಿರುವುದು ಜಿಲ್ಲಾಡಳಿತ ಮತ್ತು ಸಾರ್ವಜನಿಕರಿಗೆ ತುಸು ನೆಮ್ಮದಿ ತಂದಿದೆ. ಅದರಲ್ಲೂ ಜಿಧಿಕಾರಿ ಕೆ.ಬಿ. ಶಿವಕುಮಾರ್ ಅವರು ತೆಗೆದುಕೊಂಡ ನಿರ್ಣಯಗಳು ಹಾಗೂ ಕಾರ್ಯಕ್ಷಮತೆ ಪ್ರತಿಫಲವೇ ಈ ರೀತಿಯ ಉತ್ತಮ ಬೆಳವಣಿಗೆಗೆ ಕಾರಣ ಎನ್ನಬಹುದಾಗಿದೆ.
ಶೇಕಡ ವಾರು ನೋಡಿದರೆ ಅದು ೭ಕ್ಕಿಂತಲೂ ಕಡಿಮೆ ಪಾಸಿಟಿವ್ ಪ್ರಕರಣಗಳಾಗಿದ್ದು, ಆರು ಮಂದಿ ಸೋಂಕಿತರು ಸಾವುಕಂಡಿದ್ದಾರೆ. ಇದರಿಂದ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೨೮೯ಕ್ಕೇರಿದೆ. ಇಂದು ೪೮೪೦ ಜನರಿಗೆ ಕೊರೋನ ಪರೀಕ್ಷೆ ನಡೆದಿದ್ದು ೩೪೮೮ ಜನರಿಗೆ ನೆಗೆಟಿವ್ ಎಂದು ವರದಿ ಬಂದ ಹಿನ್ನಲೆಯಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.
೧೮೬ ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್‌ನಿಂದ ಬಿಡುಗಡೆಗೊಂಡಿzರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ ೧೨೨೭೨ಕ್ಕೇರಿದೆ. ೧೬೯ ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೧೫೩ ಜನ ಕೊರೋನ ಕೇರ್ ಸೆಂಟರ್ ನಲ್ಲಿ, ೨೯೭ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, ೧೨೫೨ ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿzರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ ೧೩೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ ೨೦೦೯ ಎಂದು ಬುಲಿಟಿನ್ ತಿಳಿಸಿದೆ.
ಶಿವಮೆಗ್ಗ ನಗರ ಮತ್ತು ತಾಲೂಕಿನಲ್ಲಿ- ೧೪೪ ಭದ್ರಾವತಿಯಲ್ಲಿ- ೬೫, ಶಿಕಾರಿಪುರ- ೫೪, ತೀರ್ಥಹಳ್ಳಿ- ೧೪, ಸಾಗರದಲ್ಲಿ ೨೩, ಹೊಸನಗರದಲ್ಲಿ- ೧೯ ಹಾಗೂ ಸೊರಬದಲ್ಲಿ ೨೩ ಪ್ರಕರಣಗಳು ಪತ್ತೆಯಾದರೆ, ಇತರೆ ಜಿಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ೭ ಜನ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.