ಜಿಲ್ಲೆಯಲ್ಲಿಂದು ೫೫ ಮಂದಿ ಬೆನ್ನೇರಿ ಓರ್ವನ ಬಲಿ ಪಡೆದ ಕೊರೋನಾ…

484

ಶಿವಮೊಗ್ಗ: ಜಿಯಲ್ಲಿಂದು ೫೫ ಮಂದಿಯಲ್ಲಿ ಕೋವಿಡ್-೧೯ ಸೋಂಕು ಪತ್ತೆಯಾಗಿದ್ದು, ೬೭ ಸೋಂಕಿತರು ಗುಣಮುಖರಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಮನೆಗೆ ಸುರಕ್ಷಿತವಾಗಿ ಹಿಂತಿರುಗಿದ್ದರೆ, ಮಹಾಮಾರಿ ಕೊರೋನಾ ಇಂದು ಮತ್ತೆ ಓರ್ವ ಸೋಂಕಿತನ ಬಲಿ ಪಡೆದಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ೧೨೫೯ಕ್ಕೇರಿದೆ.
ಜಿ ಹೆಲ್ತ್ ಬುಲಿಟಿನ್‌ನಲ್ಲಿ ಪ್ರಕಟವಾದಂತೆ ಜಿಯಲ್ಲಿ ಇಂದು ಒಂದು ಸಾವಾಗಿದ್ದು, ಸಾವಿನ ಸಂಖ್ಯೆ ೨೨ಕ್ಕೇರಿದೆ. ಇದುವರೆಗೂ ೨೫೪೪೬ ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ೨೩೮೯೧ ಜನರಿಗೆ ಕೊರೋನ ನೆಗೆಟಿವ್ ಎಂದು ವರದಿ ಬಂದಿದೆ. ೧೨೫೯ ಜನರಿಗೆ ಸೋಂಕು ಪತ್ತೆಯಾಗಿದೆ. ೨೯೬ ಜನರ ವರದಿ ಇನ್ನೂ ಕೈ ಸೇರಬೇಕಿದೆ.
ಇಂದು ೬೭ ಜನರು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದು ಇದುವರೆಗೂ ಗುಣಮುಖರಾದವರ ಸಂಖ್ಯೆ ೬೭೫ಕ್ಕೇರಿದೆ. ೨೦೬ ಜನ ಸೋಂಕಿನಿಂದ ಬಳಲುತ್ತಿದ್ದು ಇವರುಗಳು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.
೨೯೫ ಜನ ಸೋಂಕಿತರು ಕೊರೋನ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೧೫ ಜನ ಖಾಸಗಿ ಆಸ್ಪತ್ರೆಯಲ್ಲೂ ಉಳಿದ ೪೬ ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿ zರೆ. ಇವರುಗಳ ಒಟ್ಟು ಸಂಖ್ಯೆ೫೬೨ ಕ್ಕೇರಿದೆ. ಈ ೫೬೨ ಜನ ಮತ್ತು ಇದುವರೆಗೂ ಗುಣಮುಖರಾದವರ ಸಂಖ್ಯೆ ೬೭೫ ಸೇರಿದರೆ ೧೨೩೭ ಸೋಂಕಿತರಿದ್ದು ಇದರ ಜೊತೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೨೨ ಸೇರಿಸಿದರೆ ಒಟ್ಟು ೧೨೫೫ ಕೊರೋನ ಪಾಸಿಟಿವ್ ಸಂಖ್ಯೆ ಎಂದು ಜಿ ಹೆಲ್ತ್ ಬುಲಿಟಿನ್ ತಿಳಿಸುತ್ತದೆ. ಜಿಲ್ಲೆಯಲ್ಲಿ ಸುಮಾರು ೩೧೦ ಕಂಟೈನ್ಮೆಂಟ್ ಜೋನ್‌ಗಳಿದ್ದು ೫೮ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳಾಗಿವೆ.
ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೆಗ್ಗ ನಗರ ಮತ್ತು ತಾಲೂಕಿನಲ್ಲಿ ೩೯ ಜನ, ಶಿಕಾರಿಪುರದಲ್ಲಿ ೧, ಭದ್ರಾವತಿಯಲ್ಲಿ ೭ ಜನ, ಸೊರಬ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಮೆಗ್ಗಾನ್ ನಲ್ಲಿ ಮತ್ತು ಕೊರೋನ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.