ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ೭.೩೧ ಲಕ್ಷ ರೂ.

502

ದಾವಣಗೆರೆ : ಕರೋನಾ ವೈರಸ್‌ನಿಂದ ದೇಶಾದ್ಯಂತ ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟದಿಂದ ಸಂತ್ರಸ್ಥರಿಗೆ ನೆರವಾಗುವ ದೃಷ್ಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾವಣಗೆರೆ ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಕ್ಕೂಟದಿಂದ ೭,೩೧,೦೦೧ ರೂಗಳನ್ನು ಪರಿಹಾರ ನೀಡಲಾಯಿತು.
ಇಂದು ಒಕ್ಕೂಟದ ಗೌರವ ಅಧ್ಯಕ್ಷರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿಗಳ ಮೂಲಕ ಸಹಕಾರ ಸಂಘಗಳ ಉಪನಿಬಂಧಕರಿಗೆ ಚೆಕ್‌ನ್ನು ಹಸ್ತಾಂತರಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಒಕ್ಕೂಟದ ಅಧ್ಯಕ್ಷರಾದ ಕೋಗುಂಡಿ ಬಕ್ಕೇಶಪ್ಪ, ಕಾರ್‍ಯದರ್ಶಿ ಎನ್‌ಎಂಜೆಬಿ ಮುರುಗೇಶ್, ಸದಸ್ಯರುಗಳಾದ ಎಸ್.ಎಸ್.ಮಲ್ಲಿಕಾರ್ಜುನ್, ಬಿ.ಸಿ. ಉಮಾಪತಿ, ಎಸ್.ಕೆ.ವೀರಣ್ಣ, ದೇವರಮನಿ ಶಿವಕುಮಾರ್, ಕಂಚಿಕೇರಿ ಮಹೇಶ್, ಮತ್ತಿಹಳ್ಳಿ ವೀರಣ್ಣ, ಕಿರುವಾಡಿ ಸೋಮಶೇಖರ್, ಕುರ್ಕಿ ಕುಬೇರಪ್ಪ, ರಮಣ್ ಲಾಲ್, ಜಯಕುಮಾರ್, ಓಂಕಾರಪ್ಪ, ಸಿ.ಚಂದ್ರಶೇಖರ್, ಆರ್.ಜಿ.ಶ್ರೀನಿವಾಸ ಮೂರ್ತಿ, ಡಿ.ವಿ.ಆರಾಧ್ಯಮಠ, ಸಹಕಾರ ಸಂಘಗಳ ಉಪನಿಬಂಧಕ ಬಿ.ಜಯಪ್ರಕಾಶ್ ಮತ್ತಿತರರಿದ್ದರು.
ಒಕ್ಕೂಟದ ಸದಸ್ಯ ಬ್ಯಾಂಕ್‌ಗಳು : ದಾವಣಗೆರೆ ಅರ್ಬನ್ ಕೋ- ಆಪ್‌ರೇಟಿವ್ ಬ್ಯಾಂಕ್-೧,೭೦,೦೦೦, ಬಾಪೂಜಿ ಬ್ಯಾಂಕ್ -೧,೫೦,೦೦೦, ದಾವಣಗೆರೆ-ಹರಿಹರ ಅರ್ಬನ್ ಕೋ- ಆಪ್‌ರೇಟಿವ್ ಬ್ಯಾಂಕ್-೧,೫೦,೦೦೦, ಶಿವ ಕೋ- ಆಪ್‌ರೇಟಿವ್ ಬ್ಯಾಂಕ್-೧,೧೦,೦೦೦, ಕನ್ನಿಕಾ ಪರಮೇಶ್ವರಿ ಕೋ- ಆಪ್‌ರೇಟಿವ್ ಬ್ಯಾಂಕ್-೧,೦೧,೦೦೧, ಅಂಭಾಭವಾನಿ ಕೋ- ಆಪ್‌ರೇಟಿವ್ ಬ್ಯಾಂಕ್, ೨೫,೦೦೦, ಸಿಟಿ ಕೋ- ಆಪ್‌ರೇಟಿವ್ ಬ್ಯಾಂಕ್- ೧೫,೦೦೦, ಮುರುಘರಾಜೇಂದ್ರ ಕೋ- ಆಪ್‌ರೇಟಿವ್ ಬ್ಯಾಂಕ್-೧೦,೦೦೦.