ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಎನ್‌ಎಸ್‌ಯುಐನಿಂದ ಬಿಎಸ್‌ವೈ ಮನೆ ಮುತ್ತಿಗೆ

468

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ವಿರೋಧಿಸಿ ಶಿವಮೊಗ್ಗ ಜಿ ಕಾಂಗ್ರೆಸ್ ಅಧ್ಯಕ್ಷ ಎಸ್.ಸುಂದರೇಶ್ ನೇತೃತ್ವದಲ್ಲಿ ಜಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಜಿ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಡಿಕೆಶಿ ನಿವಾಸದ ಮೇಲೆ ದಾಳಿ ದುರುದ್ದೇಶಪೂರ್ವಕ, ಉಪ ಚುನಾವಣೆ ಹೊಸ್ತಿಲ್ಲಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಮಾಡಿರುವ ಸಂಚು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿರು.
ಎನ್‌ಎಸ್‌ಯುಐನಿಂದ
ಬಿಎಸ್‌ವೈ ಮನೆ ಮುತ್ತಿಗೆ ಯತ್ನ:
ಶಿವಮೊಗ್ಗದ ವಿನೋಬ ನಗರದಲ್ಲಿರುವ ಬಿ.ಎಸ್ ಯಡಿಯೂರಪ್ಪನವರ ಮನೆಗೆ ಎನ್ ಎಸ್ ಯು ಐ ಸಂಘಟನೆ ಮುತ್ತಿಗೆ ಹಾಕುವ ಯತ್ನ ನಡೆಸಿದ್ದು, ಮುತ್ತಿಗೆಗೆ ಯತ್ನಿಸಿದ ಸಂಘಟನೆಯ ೨೫ ಸದಸ್ಯರನ್ನ ಪೊಲೀಸರು ವಶಕ್ಕೆ ಪಡೆದಿzರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಮನೆಯ ಮೇಲೆ ಇಂದು ಬೆಳಿಗ್ಗೆ ಸಿಬಿಐ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಇದನ್ನ ಖಂಡಿಸಿ ಎನ್ ಎಸ್ ಯು ಐ ಸಂಘಟನೆ ಮಧ್ಯಾಹ್ನ ಮೂರು ಗಂಟೆಗೆ ಸಿಎಂ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿತು.
ಮುತ್ತಿಗೆಯನ್ನ ವಿನೋಬನಗರ ೬೦ ಅಡಿ ರಸ್ತೆಯಲ್ಲಿಗಯೇ ಪೊಲೀಸರು ತಡೆದಿದ್ದು ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾ ಕಾರರನ್ನ ವಶಕ್ಕೆ ತೆಗೆದುಕೊಳ್ಳಲಾಯಿತು.
ಈ ಮೊದಲೇ ಮುತ್ತಿಗೆ ಹಾಕುವ ವಿಷಯ ತಿಳಿಯುತ್ತಿದ್ದಂತೆ ಸಿಎಂನೆಯ ಸುತ್ತಲು ಪೊಲೀಸರ ಸರ್ಪಗಾವಲು ನಿರ್ಮಿಸಲಾಗಿತ್ತು. ಮುತ್ತಿಗೆಯಲ್ಲಿ ಎಸ್ ಎಸ್ ಯು ಐ ಮಧು, ಚೇತನ್ ಗೌಡ, ಬಾಲಾಜಿ, ಆರೀಪ್ ಮೆದಲಾದವರು ಭಾಗವಹಿಸಿದ್ದರು.