ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮಾಲತೇಶ್ ಭಂಡಾರಿ

338

ಶಿಕಾರಿಪುರ ಃ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ ಶಿಕಾರಿಪುರ ಕಾಂಗ್ರೆಸ್ ಮುಖಂಡ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಬಿ.ಜಿ ಮಾಲತೇಶ್ ಭಂಡಾರಿ ರವರನ್ನು ಜಿಲ್ಲಾಧ್ಯಕ್ಷ ಸುಂದರೇಶ್ ನೇಮಕಗೊಳಿಸಿದ್ದಾರೆ.
ತಾಲೂಕು ಯುವ ಘಟಕದ ಅಧ್ಯಕ್ಷರಾಗಿ, ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಯಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ತೊಡಗಿಸಿ ಕೊಂಡಿರುವ ಮಾಲತೇಶ್‌ರವರನ್ನು ಇದೀಗ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಗಿ ನೇಮಕಗೊಳಿಸಲಾಗಿದ್ದು ಗುರುವಾರ ಜಿಲ್ಲಾಧ್ಯಕ್ಷ ಸುಂದರೇಶ್ ಆದೇಶ ಪತ್ರವನ್ನು ನೀಡಿದ್ದಾರೆ.
ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಗೆ ಹೆಚ್ಚಿನ ಗಮನ ಮಹತ್ವ ನೀಡಿ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಹೆಚ್ಚು ಬಲಿಷ್ಠಗೊಳಿಸಲು ಸಹಕರಿಸುವ ಜತೆಗೆ ಪಕ್ಷದ ಸೂಚನೆ ಮತುತಿ ಆದೇಶಗಳ ಅನುಸಾರ ಪಕ್ಷ ನೀಡುವ ಜವಾಬ್ದಾರಿ,ನೀತಿ ನಿರೋಪನೆಗಳು ಉಲ್ಲಂಘನೆಯಾಗದ ರೀತಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವ ಜಿಲ್ಲಾಧ್ಯಕ್ಷರು ಈ ಕೂಡಲೇ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಯೋನ್ಮುಖರಾಗುವಂತೆ ಹಾಗೂ ಜಿಲ್ಲಾ ಸಮಿತಿಯ ಜತೆ ನಿರಂತರ ಸಂಪರ್ಕದಲ್ಲಿರುವಂತೆ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಆದೇಶ ಪತ್ರ ವಿತರಣೆಯ ಸಂದರ್ಬದಲ್ಲಿ ತಾಲೂಕು ಯುವ ಘಟಕದ ಅಧ್ಯಕ್ಷ ಮಲ್ಲಿಕನಾಯ್ಕ, ಮುಖಂಡ ಜೀನಳ್ಳಿ ದೊಡ್ಡಪ್ಪ, ಶ್ರೀಕಾಂತ್ ಮತ್ತಿತರರು ಹಾಜರಿದ್ದರು.