ಜಿಯಲ್ಲಿ ಕೊರೋನ ಸೋಂಕಿನ ಸಂಖ್ಯೆ ೧೦೧ ಜಿಲ್ಲೆ – ರಾಜ್ಯದ ಹೆಲ್ತ್ ಬುಲಿಟಿನ್‌ನಲ್ಲಿ ಭಾರೀ ವೆತ್ಯಾಸ: ಗೊಂದಲ

469

ಶಿವಮೊಗ್ಗ: ಇಂದು ಜಿಲ್ಲೆಯಲ್ಲಿ ಭರ್ಜರಿ ೧೦೧ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು ಜಿ ಹೆಲ್ತ್ ಬುಲಿಟಿನ್‌ನಲ್ಲಿ ಪ್ರಕಟಗೊಂಡಿದ್ದು, ರಾಜ್ಯ ಹೆಲ್ತ್ ಬುಲಿಟಿನ್‌ನಲ್ಲಿ ೧೫ ಎಂದು ಪ್ರಕಟಗೊಂಡಿದೆ.
ಇದರಿಂದಾಗಿ ಜಿ ಮತ್ತು ರಾಜ್ಯ ಹೆಲ್ತ್ ಬುಲಿಟಿನ್‌ನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಗೊಂದಲದ ಗೂಡಾಗಿದೆ. ಸೋಂಕಿತರ ಒಟ್ಟು ಸಂಖ್ಯೆಗಳಲ್ಲೂ ಬಹಳ ವ್ಯತ್ಯಾಸವುಂಟಾ ಗಿದೆ. ರಾಜ್ಯಗಿಂತ ಜಿ ಹೆಲ್ತ್ ಬುಲಿಟಿನ್ ಹೆಚ್ಚಿನ ಅಪ್ಡೇಟ್ ಆಗಿದ್ದರ ಪರಿಣಾಮ ಎಂದಿನಂತೆ ಜಿ ಹೆಲ್ತ್ ಬುಲಿಟಿನ್ ಸುದ್ದಿಗಾಗಿ ಪರಿಗಣಿಸಲಾಗುವುದು.
ಜಿ ಹೆಲ್ತ್ ಬುಲಿಟಿನ್ ಪ್ರಕಾರ ಜಿಯ ಒಟ್ಟು ಸೋಂಕಿತರ ಸಂಖ್ಯೆ ೨,೧೯೫ ಆಗಿದ್ದು ಇಂದು ಸಹ ೩ ಜಿಯಲ್ಲಿ ಸಾವನ್ನಪ್ಪಿzರೆ. ಇಂದು ಸಹ ೬೪ ಜನ ಸೋಂಕಿನಿಂದ ಗುಣಮುಖರಾಗಿದ್ದು ಮೆಗ್ಗಾನ್ ಆಸ್ಪತ್ರೆ ಯಿಂದ ಇದುವರೆಗೂ ಬಿಡುಗಡೆ ಯಾದವರ ಸಂಖ್ಯೆ ೧೧೫೯ ಎಂದು ಹೆಲ್ತ್ ಬುಲಿಟಿನ್ ತಿಳಿಸಿದೆ.
೨೯,೭೬೩ ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಿದ್ದು ೨೭,೧೬೮ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ೨,೧೯೫ ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಬಂದಿದೆ. ಇದರಿಂದ ಇನ್ನೂ ೫೦೦ ಜನರ ವರದಿ ಬರಬೇಕಿದೆ.
೨೪೯ ಜನ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೫೧೫ ಜನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿ zರೆ. ೮೦ ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿzರೆ. ೯೧ ಜನ ಹೋಂ ಕ್ವಾರಂಟೈನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿzರೆ.
ಕಂಟೈನ್ಮೆಂಟ್ ಜೋನ್‌ಗಳು ಸೋಂಕಿನಿಂದ ಹೆಚ್ಚಾಗಿವೆ. ೮೧೬ ಜನ ಕಂಟೈನ್ಮೆಂಟ್ ಜೋನ್‌ಗಳಿದ್ದು, ೨೯೫ ಜನ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳಾಗಿವೆ.
ಶಿವಮೊಗ್ಗ-೬೧, ಭದ್ರಾವತಿ-೧೪, ಶಿಕಾರಿಪುರ-೧೦, ಸಾಗರ-೧೦, ಸೊರಬ-೧, ಹೊಸನಗರ-೨, ಬೇರೆ ಜಿಯಿಂದ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆಪಡೆಯುತ್ತಿರುವವರ ಸಂಖ್ಯೆ ೩ ಎಂದು ಬುಲಿಟಿನ್ ಪ್ರಕಟಿಸಿದೆ.