ಜಿಂಕೆ ಭೇಟೆ; ಆರೋಪಿಗಳ ಬಂಧನ

340

ಶಿವಮೊಗ್ಗ : ಜಿಂಕೆಯನ್ನು ಬೇಟೆಯಾಡಿ ಮಾಂಸ ಹಾಗೂ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿzರೆ.
ಕುಂಸಿ ಠಾಣೆ ಪಿಎಸ್‌ಐ ನವೀನ್ ಕುಮಾರ್ ಮಠಪತಿ ನೇತೃತ್ವದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ೪೦ ಕೆ.ಜಿ ಜಿಂಕೆ ಮಾಂಸ, ಜಿಂಕೆ ತಲೆ, ಚರ್ಮವನ್ನ ವಶಪಡಿಸಿಕೊಳ್ಳಲಾಗಿದ್ದು. ಪ್ರಕರಣದಲ್ಲಿ ಜಿಂಕೆ ಭೇಟೆಯಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕುಂಸಿ ಠಾಣ ವ್ಯಾಪ್ತಿ ಮಂಡಗಟ್ಟದ ಅರಣ್ಯ ಪ್ರದೇಶದಲ್ಲಿ ಆಗತಾನೆ ಭೇಟೆಯಾಡಿದ್ದ ಜಿಂಕೆ ಮಾಂಸ, ಚರ್ಮ, ತಲೆ ಬುರುಡೆಗಳನ್ನ ಬೇರ್ಪಡಿಸಿದ ಖದೀಮರು, ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನವಷ್ಟರಲ್ಲಿ ಪಿಎಸ್‌ಐ ನವೀನ್ ಕುಮಾರ್ ಮತ್ತು ಅವರ ತಂಡ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿzರೆ.
ಜಿಂಕೆ ಮಾಂಸ, ಜಿಂಕೆಯ ಕೊಂಬು ಹಾಗೂ ಚರ್ಮವನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಿಲ್ ಮತ್ತು ಹನುಮಂತ ಎಂಬ ಆರೋಪಿಗಳನ್ನ ಬಂಧಿಸಲಾಗಿದ್ದು ಇವರಿಬ್ಬರೂ ಆಡಗಡಿಯ ನಿವಾಸಿಗಳೆಂದು ತಿಳಿದುಬಂದಿದೆ.