ಜಲ್ಲಿ ಕ್ರಷರ್‌ನಲ್ಲಿ ಕಳುವಾಗಿದ್ದ ಮಾಲುಸಹಿತ ಆರೋಪಿಗಳ ಬಂಧನ

657

ಹೊನ್ನಾಳಿ: ಜಲ್ಲಿ ಕ್ರಷರ್‌ನಿಂದ ಕಳವಾಗಿದ್ದ ನೈಲಾನ್ ಬೆಲ್ಟ್ ಹಾಗೂ ಗೂಡ್ಸ್ ವಾಹನವೊಂದನ್ನು ಹೊನ್ನಾಳಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿzರೆ.
ತಾಲೂಕಿನ ಸೊರಟೂರು ಗ್ರಾಮದ ಹನುಮಂತ(೨೨), ಮಂಜುನಾಥ(೨೨) ಹಾಗೂ ಪವನ್(೨೨) ಬಂಧಿತ ಆರೋಪಿಗಳು. ಬಂಧಿತರಿಂದ ೮೦ ಸಾವಿರ ರೂ.ಗಳಷ್ಟು ಮಲ್ಯದ ನೈಲಾನ್ ರಬ್ಬರ್ ಬೆಲ್ಟ್ ಹಾಗೂ ಕಳ್ಳತನಕ್ಕೆ ಬಳಸಿದ್ದ ಒಂದು ಲಕ್ಷ ರೂ.ಗಳಷ್ಟು ಮಲ್ಯದ ಆಪೇ ಗೂಡ್ಸ್ ವಾಹನವನ್ನು ಜಪ್ತಿ ಮಾಡಿzರೆ.
ತಮ್ಮ ಜಲ್ಲಿ ಕ್ರಷರ್‌ನ ನೈಲಾನ್ ಬೆಲ್ಟ್ ಕಳವಾಗಿರುವ ಬಗ್ಗೆ ತಾಲೂಕಿನ ಜಲ್ಲಿ ಕ್ರಷರ್‌ನ ಮಾಲೀಕರೊಬ್ಬರು ಇತ್ತೀಚೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದರು.
ತಾಲೂಕಿನ ದಿಡಗೂರು ಗ್ರಾಮದ ಬಸ್ ಪ್ರಯಾಣಿಕರ ತಂಗುದಾಣದ ಬಳಿ ಪಿಎಸ್ಸೈ ಬಸನಗೌಡ ಬಿರಾದಾರ ಮತ್ತು ಸಿಬ್ಬಂದಿ ಸೋಮವಾರ ತಪಾಸಣೆ ನಡೆಸುತ್ತಿದ್ದ ವೇಳೆ ಆಪೇ ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ನೈಲಾನ್ ಬೆಲ್ಟ್ ಪತ್ತೆಯಾಗಿದೆ.
ಸಿಪಿಐ ಟಿ.ವಿ. ದೇವರಾಜ್ ನೇತತ್ವದಲ್ಲಿ ಪಿಎಸ್ಸೈ ಬಸನಗೌಡ ಬಿರಾದಾರ, ಸಿಬ್ಬಂದಿ ಫೈರೋಜ್ ಖಾನ್, ವೆಂಕಟರಮಣ, ಶಾಂತಕುಮಾರ್, ಜಗದೀಶ್, ಚೇತನ್‌ಕುಮಾರ್, ರಾಮಚಂದ್ರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.