ಜಲಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ

426

ಹೊನ್ನಾಳಿ: ಜಲಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಹೇಳಿದರು.
ತಾಲೂಕಿನ ಬಿದರಗಡ್ಡೆ ಗ್ರಾಮದ ತುಂಗಭದ್ರಾ ನದಿಗೆ ೩೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಹೊಳೆಮೆಟ್ಟಿಲುಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಆಸರೆಯಾಗಿರುವ ತುಂಗಭದ್ರಾ ನದಿಯನ್ನು ನಾವು ಚೆನ್ನಾಗಿಟ್ಟುಕೊಳ್ಳಬೇಕು. ನದಿಗೆ ತ್ಯಾಜ್ಯ ವಸ್ತುಗಳ ಸೇರದಂತೆ ನೋಡಿ ಕೊಳ್ಳಬೇಕು. ನಮ್ಮ ಜೀವನಾಡಿಯಾಗಿ ರುವ ನದಿಯನ್ನು ಎಲ್ಲರೂ ರಕ್ಷಿಸೋಣ ಎಂದು ತಿಳಿಸಿದರು.
ಬಿದರಗಡ್ಡೆ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶ ದಿಂದ ತುಂಗಭದ್ರಾ ನದಿಗೆ ಹೊಳೆಮೆಟ್ಟಿಲುಗಳನ್ನು ನಿರ್ಮಿಸಲಾ ಗಿದೆ. ನದಿಯಲ್ಲಿ ಬಟ್ಟೆ ಶುಚಿಗೊಳಿಸಲು ಆಗಮಿಸುವ ಮಹಿಳೆಯರಿಗೆ, ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ. ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸ ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಅಭಿವದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸರ್ವತೋಮುಖ ಅಭಿವದ್ಧಿ ತಮ್ಮ ಗುರಿಯಾಗಿದೆ. ಕೋಟಿಗಟ್ಟಲೇ ಅನುದಾನ ತಂದು ಅನೇಕ ಗ್ರಾಮಗಳು, ತಾಂಡಾಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸ ಲಾಗಿದೆ. ಬಾಕ್ಸ್ ಚರಂಡಿ, ಸಮುದಾಯ ಭವನಗಳು, ಜಮೀನುಗಳ ಸಂಪರ್ಕ ರಸ್ತೆಗಳು ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯ ಸಿ. ಸುರೇಂದ್ರನಾಯ್ಕ, ತಾಪಂ ಅಧ್ಯಕ್ಷ ಕುಳಗಟ್ಟೆ ಕೆ.ಎಲ್. ರಂಗನಾಥ್, ಎಚ್. ಕಡದಕಟ್ಟೆ ಗ್ರಾಪಂ ಸದಸ್ಯ ಬಿ.ಎಚ್. ನಾಗರಾಜ್, ಕಸಬಾ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎಚ್. ನೀಲಕಂಠಪ್ಪ, ಗ್ರಾಮದ ಮುಖಂಡ ರಾದ ಬಿ.ಎಚ್. ಗಣೇಶಪ್ಪ, ಬಿ.ಎಚ್. ನಾಗೇಂದ್ರಪ್ಪ, ಎ.ಸಿ. ಮಲ್ಲಿಕಾರ್ಜುನ್, ಬಿ.ಎಚ್. ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.