ಜನಾನುರಾಗಿ ಶಿಕ್ಷಕಿ ಅನಿತಾ ಮೇರಿಗೆ ಮಾತೃ ವಿಯೋಗ

550

ತೀರ್ಥಹಳ್ಳಿ: ಪಟ್ಟಣದ ಕೊಪ್ಪ ಸರ್ಕಲ್ ನಿವಾಸಿ ನಿವೃತ್ತ ಶಿಕ್ಷಕಿ ಪುಷ್ಪ ಮೇಡಂ (ಅಂತೋನಿಯಮ್ಮ) ೯೪ ವರ್ಷ ಇಂದು ಬೆಳಿಗ್ಗೆ ೫ ಗಂಟೆಗೆ ಶಿವಮೆಗ್ಗ ದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ವೃತ್ತಿ ಜೀವನದಲ್ಲಿ ಶಿಕ್ಷಕಿಯಾಗಿ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ,ಕಿಮ್ಮನೆ, ಶಿಬಿನಕೆರೆ ಮತ್ತು ಕುರುವಳ್ಳಿಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರು ಈರ್ವ ಪುತ್ರಿಯರು ಹಾಗೂ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಇವರ ಪಾರ್ಥಿವ ಶರೀರವನ್ನು ಭದ್ರಾವತಿಯ ಹುಡ್ಕೋ ಕಾಲೋನಿಯಲ್ಲಿ ನೆಲೆಸಿರುವ ಪುತ್ರಿ ಶಿಕ್ಷಕಿಯಾಗಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ರಾಜ್ಯ ಮಟ್ಟದ ಪುರಸ್ಕಾರ ಪಡೆದಿರುವ ಅನಿತಾ ಮೇರಿ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಮಧ್ಯಾಹ್ನ೧೨ ಗಂಟೆಗೆ ಕ್ರೈಸ್ತರ ಪೂಜಾ ವಿಧಿ ವಿಧಾನಗಳ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ.