ಜನರ ಜೀವಕ್ಕೆ ಮತ್ತು ಜೀವನಕ್ಕೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ

262

(ಹೊಸ ನಾವಿಕ ನ್ಯೂಸ್)
ಹೊನ್ನಾಳಿ: ಜನರ ಜೀವಕ್ಕೆ ಮತ್ತು ಜೀವನಕ್ಕೆ ತೊಂದರೆಯಾಗದಂತೆ ಪಿಡಿಒಗಳು ಕಾರ್ಯನಿರ್ವಹಿಸ ಬೇಕು ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ವಾಗಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಬಸನಗೌಡ ಕೋಟೂರ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಳ್ಳಲಾ ಗಿದ್ದ ಪಿಡಿಒಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊರೊನಾ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿದ್ದು, ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಗ್ರಾಪಂ ಮಟ್ಟದಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಜಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಗ್ರಾಪಂ ವ್ಯಾಪ್ತಿಯೊಳಗೆ ಯಾವುದೇ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳು, ಜತ್ರಾ ಮಹೋತ್ಸವಗಳು ನಡೆಯದಂತೆ ಎಚ್ಚರವಹಿಸಬೇಕೆಂದರು. ಹಳ್ಳಿಗಳಲ್ಲಿ ಜಗಲಿ ದೇವಸ್ಥಾನದ ಕಟ್ಟೆಗಳ ಮೇಲೆ ಜನದಟ್ಟಣೆ ಸೇರದಂತೆ ನೋಡಿ ಕೊಳ್ಳಬೇಕೆಂದು ಸಲಹೆ ನೀಡಿದರು.
ಮದುವೆಗೆ ೫೦ ಜನ ಅಂತ್ಯ ಸಂಸ್ಕಾರಕ್ಕೆ ಕೇವಲ ೨೦ ಜನರಿರುವಂತೆ ಸಾರ್ವಜನಿಕರಿಗೆ ಜಗೃತಿ ಮೂಡಿಸ ಬೇಕು. ದರ್ಗಾಗಳಲ್ಲಿ ಮಲ್ವಿಯೊಬ್ಬ ರಿಗೆ ಹೊರತುಪಡಿಸಿ ನಮಾಜ್ ಮಾಡಲು ಯಾರಿಗೂ ಅವಕಾಶವಿರು ವುದಿಲ್ಲ. ನಿಗದಿತ ಸಮಯಕ್ಕನುಗುಣ ವಾಗಿ ಕೋವಿಡ್ ನಿಯಂತ್ರಣದ ಜೊತೆ- ಜೊತೆಗೆ ಗ್ರಾಪಂ ಕೆಲಸಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಮಾಸ್ಕ್ ಹಾಕದವರಿಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವವರಿಗೆ ಯಾರು ಹೆಚ್ಚಾಗಿ ದಂಡ ವಿಧಿಸುತ್ತಾರೋ ಅಂತಹ ಪಿಡಿಒಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಪ್ರತೀ ದಿನ ತಾವು ಇಒ ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ ಅವರು, ಪ್ರತೀ ದಿನ ತಾಲ್ಲೂಕಿನ ಎ ಹಳ್ಳಿಗಳಲ್ಲಿನ ವಿದ್ಯಮಾನದ ಬಗ್ಗೆ ಇಂಟೆಲಿಜೆನ್ಸಿ ವರದಿಯನ್ನು ತರಿಸಿಕೊಳ್ಳುತ್ತಿದ್ದು ಪಿಡಿಒಗಳು ಎಚ್ಚರದಿಂದಿರಬೇಕೆಂದು ತಿಳಿಸಿದರು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಹೆದರದೇ ದೂರು ದಾಖಲಿಸಬೇಕೆಂದು ಸೂಚಿಸಿದರು.
ಟಿಎಚ್‌ಒ ಕೆಂಚಪ್ಪ ಮಾತನಾಡಿ ಕೋವಿಡ್ ವ್ಯಾಕ್ಸಿನ್ ಲಸಿಕೆ ನೀಡಲು ಎ ಹಳ್ಳಿಗಳಿಗೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಸ್ವಯಂ ಪ್ರೇರಿತರಾಗಿ ೪೫ ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವಂತೆ ಪಿಡಿಒಗಳು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸ ಬೇಕೆಂದು ಕರೆ ನೀಡಿದರು.
ಪಿಡಿಒಗಳು ವ್ಯಾಕ್ಸಿನೇಶನ್ ಪಡೆದಿರುವವರ, ಕೊರೊನಾ ಸೋಂಕಿತರ, ಗಂಟಲು ಮತ್ತು ಮೂಗಿನ ದ್ರಾವಣ ನೀಡಿದವರ ಹಾಗೂ ಕೊರೊನಾ ಸೋಂಕಿತ ರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿ ಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಎಂದು ತಿಳಿಸಿದರು.
೪೫ ಮತ್ತು ೬೦ ವರ್ಷ ದಾಟಿದವರ ಸಂಖ್ಯೆ ಹಾಗೂ ಇವರಲ್ಲಿ ಕೋವಿಡ್ ಲಸಿಕೆಯನ್ನು ಪಡೆದಿರುವ ವರ ನಿಖರವಾದ ಅಂಕಿ-ಅಂಶಗಳ ಮಾಹಿತಿ ಲಭ್ಯವಿರುವಂತೆ ನೋಡಿ ಕೊಳ್ಳಬೇಕೆಂದು ಸೂಚಿಸಿದರು.
ಇಒ ಗಂಗಾಧರಮೂರ್ತಿ ಮಾತನಾಡಿ, ಸರ್ಕಾರದ ಕೋವಿಡ್ ನಿಯಮಗಳನ್ನು ಎಲ್ಲರೂ ಕಡಾಯ ವಾಗಿ ಪಾಲಿಸುವಂತೆ ನೋಡಿಕೊಳ್ಳ ಬೇಕು. ಹಳ್ಳಿಗಳು ಸ್ವಚ್ಛತೆಯಿಂದಿರು ವಂತೆ ಎಚ್ಚರ ವಹಿಸಬೇಕು.
ಬೆಂಗಳೂರು ಸೇರಿದಂತೆ ಬೇರೆಡೆ ಗಳಿಂದ ಬಂದವರ ಆರೋಗ್ಯದ ಬಗ್ಗೆ ಗಮನಹರಿಸಿ, ಅನುಮಾನಾಸ್ಪದ ವ್ಯಕ್ತಿಗಳಿದ್ದರೆ ಅವರನ್ನು ಕೋವಿಡ್ ಟೆಸ್ಟ್‌ಗೊಳಪಡಿಸಬೇಕು. ಎ ಇಲಾಖೆಗಳಿಗೆ ಸಹಕಾರ ನೀಡಿ ಕೊರೊನಾ ಹರಡದಂತೆ ಎಚ್ಚರವಹಿಸ ಬೇಕೆಂದು ಸಲಹೆ ನೀಡಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಎಚ್.ವಿ. ರಾಘವೇಂದ್ರ, ತಾಪಂ ವ್ಯವಸ್ಥಾಪಕ ಶಂಭುಲಿಂಗ ಉಪಸ್ಥಿತರಿದ್ದರು.