ಜಡೆ ಮಠದ ಸಿದ್ಧವೃಷಭೇಂದ್ರ ಶ್ರೀಗಳ ಗದ್ದುಗೆ ಪುನಶ್ಚೇತನ ಮಹತ್ಕಾರ್ಯ: ಬೆಕ್ಕಿನ ಕಲ್ಮಠ ಶ್ರೀಗಳು

457

ಸೊರಬ: ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಿದ ಜಡೆ ಮಠದ ಸಿದ್ದವಷಭೇಂದ್ರ ಸ್ವಾಮೀಜಿಗಳ ಕತ ಗದ್ದುಗೆ ಪುನಶ್ಚೇತನಗೊಳಿಸುತ್ತಿರುವುದು ಮಹತ್ಕಾರ್ಯ ಎಂದು ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸಿದ್ದವಷಭೇಂದ್ರ ಸ್ವಾಮೀಜಿ ಅವರ ಗದ್ದುಗೆ ಪುನರ್ ನಿರ್ಮಾಣ ಕಾರ್ಯದಲ್ಲಿ ಕತಗದ್ದುಗೆ ಬಗ್ಗೆ ಇತಿಹಾಸದ ಮಾಹಿತಿ ನೀಡಿ ಮಾತನಾಡಿದರು.
೧೨ ಶತಮಾನದಲ್ಲಿ ಬಸವಣ್ಣ ಅವರು ಧಾರ್ಮಿಕ ಆಚರಣೆಗಳ ಮೂಲಕ ಸಮಾಜವನ್ನು ಜಗೃತಿ ಗೊಳಿಸುವ ನಿಟ್ಟಿನಲ್ಲಿ ಸಮಾಜ ಸುಧಾರಣೆಗೆ ಮುಂದಾಗಿದ್ದರು. ಅಂದಿನ ಕಾಲದಲ್ಲಿ ಮಠ ಮಂದಿರಗಳ ಅಭಿವದ್ಧಿ ಜೊತೆಗೆ ಅಕ್ಷರ ಹಾಗೂ ಅನ್ನ ದಾಸೋಹ ಮಾಡಿದ್ದರ ಫಲವಾಗಿ ಇಂದಿಗೂ ಮಠಗಳು ಅರಮನೆ ಗಳಿಗಿಂತಲೂ ಜನ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವುದು ವಿಶೇಷವಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತ ಮಿಷನರಿಗಳು ಶಿಕ್ಷಣ ಹಾಗೂ ಆರೋಗ್ಯ ನೀಡುವ ನೆಪದಲ್ಲಿ ಇಲ್ಲಿನ ಜನರನ್ನು ಮತಾಂತರಗೊಳಿಸಲು ಮುಂದಾದ ಹೊತ್ತಿನಲ್ಲಿ ಮಠಗಳು ಎಚ್ಚೆತ್ತುಕೊಂಡು ಧಾರ್ಮಿಕ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿರುವುದರ ಪರಿಣಾಮ ಇಂದಿಗೂ ಪರಂಪರೆ ಉಳಿಸಿಕೊಂಡಿವೆ ಎಂದ ಅವರು, ಸಮಾಜದ ಉಪಯೋಗಿ ಕಾರ್ಯಕ್ರಮಗಳಿಗೆ ಸರ್ಕಾರದ ಜೊತೆ ಭಕ್ತರು ಕೈಜೋಡಿಸಿದರೆ ಉನ್ನತಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಹಾಗೂ ಭಕ್ತರು ಸಂಘಟಿತರಾಗುವಂತೆ ಕರೆ ನೀಡಿದರು.
ಜಡೆ ಸಂಸ್ಥಾನ ಮಠದ ಅಭಿವೃದ್ಧಿಗೆ ಮಹಾಂತ ಸ್ವಾಮೀಜಿಗಳು ನಿರಂತರ ಶ್ರಮಿಸುತ್ತಿದ್ದು, ಮಠಗಳ ಉಳಿವಿಗೆ ರಾಜಶ್ರಮ ಹಾಗೂ ಜನಾಶ್ರಯ ಮುಖ್ಯವಾಗಿದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಮಠಗಳಿಗೆ ಪ್ರೋತ್ಸಾಹ ನೀಡಿದ ಫಲವಾಗಿ ಮಠಗಳು ಮತ್ತಷ್ಟು ಪ್ರಾಬಲ್ಯ ಪಡೆದು ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿವೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೆಳದಿ ಅರಸರ ಕಾಲದ ಜಡೆ ಸಂಸ್ಥಾನ ಮಠದ ಹಿರಿಯ ಗುರುಗಳ ನೂತನ ಗದ್ದುಗೆ ನಿರ್ಮಿಸಲು ಸರ್ಕಾರದಿಂದಲೂ ಸಹಕಾರ ನೀಡಲಾಗಿದೆ. ಕೊರಾನಾದ ಸಂಕಷ್ಟ ಕಾಲದಲ್ಲಿ ಸಮಾಜ ಬಾಂಧವರ ಸಹಕಾರದಿಂದ, ಧರ್ಮವಿzಗ ಸಂಸ್ಕಾರದ ಚೌಕಟ್ಟಿನಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದ ಅವರು, ತಮ್ಮ ತಾಯಿ ಮೈತ್ರಾದೇವಿ ಹೆಸರಿನಲ್ಲಿ ರೂ ೫ ಲಕ್ಷ ದೇಣಿಗೆ ನೀಡಿದರು.
ಇತಿಹಾಸ ಸಂಶೋಧಕ, ಡಾ. ಜಗದೀಶ್, ಗದ್ದುಗೆ ಶಿಲಾಮಂಟಪದ ಜೊತೆಗೆ ಮೂಲ ಗದ್ದುಗೆಗೆ ಧಕ್ಕೆಯಾಗ ದಂತೆ ಕುರುಹುಗಳನ್ನು ಉಳಿಸಿಕೊಂಡು ಪುನಶ್ಚೇತನ ಮಾಡಬೇಕು ಎಂದು ಸಲಹೆ ನೀಡಿದರು.
ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೂಡಾ ಅಧ್ಯಕ್ಷ ಗುರುರುಮೂರ್ತಿ, ಅರಣ್ಯ ಸಮಿತಿಯ ರಾಜ್ಯ ಉಪಾಧ್ಯಕ್ಷ ರೇವಣಪ್ಪ, ಜಯದೇವಪ್ಪ, ಜಿಪಂ ಸದಸ್ಯರಾದ ಶಿವಲಿಂಗಗೌಡ, ಸತೀಶ್, ರುದ್ರುಮುನಿ, ನೀಲಕಂಠ ಗೌಡ, ಇಂದೂಧರ್ ಒಡೆಯರ್, ಎ.ಎಲ್. ಅರವಿಂದ್, ಗುರುಪ್ರಸನ್ನಗೌಡ ಇದ್ದರು.