ಜಕ್ಕಿನಕೊಪ್ಪ ಗ್ರಾಮದಲ್ಲಿ ಕಾರ್ತಿಕೋತ್ಸವ…

365

ಶಿಕಾರಿಪುರ: ತಾಲ್ಲೂಕಿನ ಜಕ್ಕಿನಕೊಪ್ಪ ಗ್ರಾಮದಲ್ಲಿ ಕಾರ್ತಿಕೋತ್ಸವ ಸಮಾರಂಭವು ನೆರವೇರಿತು. ಪಾರ್ವತಮ್ಮ ದೇವಿ ಮತ್ತು ಆಂಜನೇಯ ಸ್ವಾಮಿಯ ಮತ್ತು ಬಸವೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಗ್ರಾಮದ ಮಹಿಳೆಯರು ಕಾರ್ತಿಕ ಮಹೋತ್ಸವದ ಅಂಗವಾಗಿ ದೀಪಗಳನ್ನು ಹಚ್ಚಿ ಕಾರ್ತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಕಾರ್ತಿಕೋತ್ಸವ ಸಂದರ್ಭದಂದು ಜಕ್ಕಿನಕೊಪ್ಪ ಗ್ರಾಮಕ್ಕೆ ಪ್ರತಿ ವರ್ಷದಂತೆ ಹೊನ್ನಾಳಿಯ ಪೂಜ್ಯಶ್ರೀಗಳಾದ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಗ್ರಾಮದ ರಾಜಬೀದಿಯಲ್ಲಿ ಪಾದಪೂಜೆಯನ್ನು ಮಾಡಿಸಿಕೊಳ್ಳುವ ಮೂಲಕ ಊರ ಜನರಿಗೆ ಆಶೀರ್ವದಿಸಿ ಆರೋಗ್ಯ, ಐಶ್ವರ್ಯ ಮತ್ತು ಮಳೆಬೆಳೆ ಸಕಲ ಜೀವಿಗಳು ಆರೋಗ್ಯವಾಗಿರಲಿ ಹಾಗೂ ಊರ ಗ್ರಾಮಸ್ಥರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಜಕ್ಕಿನಕೊಪ್ಪ ಗ್ರಾಮವು ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತವರುಮನೆ ಯಾಗಿತ್ತು . ನನಗೂ ಸಹ ನಿಮ್ಮ ಊರಿಗೆ ಕರೆಸಿ ರಂಗೋಲಿ ಅಲಂಕಾರ ತೋರಣ ಕಟ್ಟಿ ನನ್ನನ್ನು ಸ್ವಾಗತ ಮಾಡಿ ಪಾದಪೂಜೆ ಮಾಡುವ ಮೂಲಕ ನನ್ನನ್ನು ಬರಮಾಡಿಕೊಂಡು ಭಕ್ತಿಯಿಂದ ನನ್ನನ್ನು ಕಾಣುತ್ತೀರಿ. ಈ ಗ್ರಾಮವು ನನಗೂ ಸಹ ತವರುಮನೆ ಇದ್ದಂತೆ ಎಂದರು.
ಈ ಮೂಲಕ ಜೆಕ್ಕಿನಕೊಪ್ಪದ ಗ್ರಾಮಸ್ಥರಿಗೂ ಮತ್ತು ಯುವಕರಿಗೂ ಮಹಿಳೆಯರಿಗೂ ಮತ್ತು ಮಾತೆಯರಿಗೂ ಮಕ್ಕಳಿಗೂ ಈ ಮೂಲಕ ಆಶೀರ್ವಚನವಿತ್ತರು.
ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರಾದ ಷಣ್ಮುಖಪ್ಪ ಹಾಗೂ ಶಿಕ್ಷಕರಾದ ಹಾಲೇಶಪ್ಪ, ಸುರೇಶ್, ಪ್ರಕಾಶ್, ತಿಮ್ಮಪ್ಪ, ಬಸವರಾಜಪ್ಪ, ಲೋಕೇಶಪ್ಪ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷ ಗುರುರಾಜ್, ಬಿ ಕೆ ಕುಮಾರ್, ಶಿವು, ರುದ್ರೇಶ್, ಅತಿಥಿಗಳಾದಂಥ ಹೊನ್ನಾಳಿಯ ಪುರಸಭೆ ಸದಸ್ಯ ಹೊಸಕೇರಿ ಸುರೇಶ್ ಅವರ ಪತ್ನಿ ಶಾಂತಾ, ಹೊನ್ನಾಳಿ ಜಂಗಮ ಬ್ಯಾಂಕ್‌ನ ವ್ಯವಸ್ಥಾಪಕಿ ವಿದ್ಯಾ ಟಿ ಆರ್ ಸಂತೋಷ್ ಮತ್ತು ಊರ ಗ್ರಾಮಸ್ಥರು ಹಿರಿಯರು ಯುವಕರು ಮಹಿಳೆಯರು ಮಕ್ಕಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.