ಚುಕ್ಕಿ ಜಿಂಕೆ ಹತ್ಯೆ: ಇಬ್ಬರು ಭೇಟೆಗಾರರ ಬಂಧನ

475

ಶಿವಮೊಗ್ಗ : ತಾವರೆಕೊಪ್ಪ ಮತ್ತು ವಿರುಪಿನಕೊಪ್ಪ ಗ್ರಾಮದಲ್ಲಿ ಚುಕ್ಕಿ ಜಿಂಕೆಯೊಂದನ್ನು ಭೇಟೆಯಾಡಿದ್ದ ಈರ್ವ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿzರೆ.
ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವಿಭಾಗ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಆಯನೂರು ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶಂಕರ ವಲಯ ಅರಣ್ಯಾಧಿಕಾರಿಗಳಾದ ಕೆ.ಸಿ. ಜಯೇಶ್, ಕಸಬ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀದ್, ಅಭಯಾರಣ್ಯ ರಕ್ಷಕಿ ನೀಲಮ್ಮ ದಾದ್ರಿ, ಅರಣ್ಯ ರಕ್ಷರಾದ ಅವಿನಾಶ್ ಮತ್ತು ಅರಣ್ಯ ವೀಕ್ಷಕರಾದ ಟಿ.ಪಿ.ಮಂಜುನಾಥರವನ್ನೊಳಗೊಂಡ ತಂಡ ಕಾರ್‍ಯಾಚರಣೆ ನಡೆಸಿ ಚುಕ್ಕಿ ಜಿಂಕೆಯ ಹಸಿ ಮಾಂಸ ಮತ್ತು ಬೇಯಿ ಸಿದ ಮಾಂಸ ಹಾಗೂ ಚುಕ್ಕಿ ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿzರೆ.
ಕಾಡು ಪ್ರಾಣಿಗಳ ಭೇಟೆಯಾಡಿದ ಆರೋಪಿಗಳಾದ ತ್ಯಾವರೆಕೊಪ್ಪ ಗ್ರಾಮದ ನಿವಾಸಿ ಉಮೇಶ್ ಮತ್ತು ವಿರುವಿನಕೊಪ್ಪದ ನಿವಾಸಿ ಈಶ್ವರ (೩೦)ಎಂಬೀರ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಏಳುಮಲೈ(೨೪) ಹಾಗೂ ಗೋವಿಂದಸ್ವಾಮಿ ಹಾಗೂ ಇತರರು ತಲೆಮರೆಸಿಕೊಂಡಿರುತ್ತಾರೆ. ತಲೆಮರಿಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.