ಚಿಂತನಾ ಸಂತೆ ನಡೆಸುವ ಮೂಲಕ ೨೦ನೇ ವರ್ಷದ ಸಂಭ್ರಮದಲ್ಲಿ ಹೊಸ ಸಂಪದ: ಡಾ| ರಾಜಕುಮಾರ್

468

ಹೊನ್ನಾಳಿ: ಅನೇಕ ಸಮಾಜ ಚಿಂತಕರು ಒಂದೆಡೆ ಕಲೆತು ಗಾಂಧಿಜಯಂತಿಯ ದಿನವಾದ ಅ. ೨ರಂದು ಹೊಸ ಸಂಪದ ಎಂಬ ಸಂಘ ವೊಂದನ್ನು ರಚಿಸಿ ೨೦೨೦ರ ಇಂದಿಗೆ ಸರಿಯಾಗಿ ೨೦ ವರ್ಷಗಳು ಪೂರ್ಣ ಗೊಂಡಿದೆ ಎಂಬುದಾಗಿ ಸಂಘದ ಉಪಾಧ್ಯಕ್ಷ ಡಾ| ರಾಜಕುಮಾರ ಹೇಳಿದರು.
ಅವರು ಭಾರತೀಯ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ೨೦ನೇ ವರ್ಷದ ಹೊಸ ಸಂಪದ ಸಂಘವು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೨೦ ವರ್ಷಗಳ ಹಿಂದೆ ಹೊನ್ನಾಳಿ ತಾಲ್ಲೂಕಿಗೆ ಚಿರಪರಿಚಿತ ರಾಗಿದ್ದ ಎಜಿಕೆ ಎಂಬುದಾಗಿ ಗುರುತಿಸಲ್ಪಡುತ್ತಿದ್ದ ನರಸನಹಳ್ಳಿ ಗ್ರಾಮದ ಎಜಿ ಕೃಷ್ಣಪ್ಪನವರನ್ನು ಸಂಘದ ಸಂಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಪ್ರತಿ ಶನಿವಾರ ಚಿಂತನಸಂತೆ ಎಂಬ ಹೆಸರಿನಲ್ಲಿ ಸಂಘದ ಸಭೆ ನಡೆಸಿ ಒಂದು ವಿಷಯದ ಬಗ್ಗೆ ಪರಿಣಿತಿ ಹೊಂದಿದವರಿಂದ ವಿಷಯ ಮಂಡನೆಯ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
ಕೊರೊನಾ ಹಿನ್ನಲೆಯಲ್ಲಿ ಸರಳ ವಾಗಿ ಹಾಗೂ ಅರ್ಥಪೂರ್ಣವಾಗಿ ಗಾಂಧೀಜಿಯನ್ನು ಸ್ಮರಿಸುವ ಮೂಲಕ ೨೦ನೇ ವರ್ಷದ ಸಂಘದ ಆಚರಣೆ ಮಾಡಲಾಗುತ್ತಿದೆ ಎಂದರು.
ಸಂಘದ ಸಹಕಾರ್ಯದರ್ಶಿ ಗೊಲ್ಲರಹಳ್ಳಿ ಮಂಜುನಾಥ ಮಾತನಾಡಿ, ಸಂಘವು ಇತ್ತಿಚೀಗೆ ಪರಿಸ್ಥಿತಿಗನುಗುಣವಾಗಿ ಆನ್‌ಲೈನ್ ನಲ್ಲಿ ೫ನೇ ಸಭೆ ಮೂಲಕ ವಿಷಯ ಮಂಡನೆ ಕಾರ್ಯ ನಡೆಸಿದೆ ಹಾಗೂ ಮಾಸಿಕ ಪತ್ರಿಕೆಯಾಗಿ ೨೨ನೇ ಸಂಚಿಕೆ ಈ ಪೇಪರನ್ನು ಹೊರ ತರುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಸಂಘವು ತೊಡಗಿದ್ದು ಸದಸ್ಯರು ಇದರ ಸದುಪಯೋಗ ಪಡೆಯುತ್ತಿzರೆ ಎಂದರು.
ಸಂಘದ ಕಾರ್ಯದರ್ಶಿ ಎಚ್.ಎಂ. ಅರುಣ್‌ಕುಮಾರ, ಕುಂಕೋದ್ ಸೋಮಶೇಖರ್, ಹಾಲೇಶ್, ಗಣೇಶ್, ಲಿಂಗಯ್ಯ, ಪ್ರೇಮ ಕುಮಾರ್, ಸುರೇಶ್, ಜಯಮ್ಮ, ಶಿವಮೂರ್ತಿ, ತಿಮ್ಮೇಶ್, ದೇವಿರಮ್ಮ, ಸತೀಶ್, ಅಶೋಕ್, ಪುನೀತ್, ಶೋಭಾ, ಪ್ರತಿಭಾ, ಶಶಿಕಲಾ,ಗೀತಾ,ಮಧು, ಅಕ್ಷತಾ ಮತ್ತಿತರರು ಇದ್ದರು.
ವಿನೂತಾ ಪ್ರಕಾಶ್ ಗಾಂಧೀಜಿ ಕುರಿತ ಗೀತಾಗಾಯನ ನಡೆಸಿಕೊಟ್ಟರು.