ಘನತ್ಯಾಜ್ಯ: ಘಟಕ ನಿರ್ಮಾಣಕ್ಕೆ ಒತ್ತು ನೀಡಿ

422

ಶಿವಮೊಗ್ಗ: ಎಲ್ಲೆಡೆ ಪಸರಿಸುತ್ತಿರುವ ಕೊರೋನ ಸೋಂಕಿನ ನಿಯಂತ್ರಣ ದೊಂದಿಗೆ ವಿವಿಧ ಇಲಾಖೆಗಳ ಅನೇಕ ಯೋಜನೆಗಳ ಅನುಷ್ಠಾನ ಕಾರ್ಯ ನಿರಂತರವಾಗಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ಮೊದಲಿನಂತೆ ಎಲ್ಲಾ ಯೋಜನೆಗಳ ಅನುಷ್ಠಾನ ಮತ್ತು ಅನುಪಾಲನಾ ಕಾರ್ಯ ಸಕ್ರಿಯ ವಾಗಿ, ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಎಲ್ಲಾ ಇಲಾಖೆಗಳ ಕಂದಾಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲೂಕುಗಳ ಕಂದಾಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಅನೇಕ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದ್ದು, ಮತ್ತೆ ಕೆಲವು ಪ್ರದೇಶಗಳಲ್ಲಿ ನಿವೇಶನದ ಸಮಸ್ಯೆಗಳಿರುವುದನ್ನು ಗಮನಿಸಲಾ ಗಿದೆ. ಈ ಸಂದರ್ಭದಲ್ಲಿ ನೆರೆಯ ಕೆಲವು ಗ್ರಾಮಗಳನ್ನು ಒಟ್ಟುಗೂಡಿಸಿಕೊಂಡು ಘಟಕಗಳನ್ನು ಸ್ಥಾಪಿಸುವ ಬಗ್ಗೆ ಮುಂದಿನ ಒಂದು ವಾರದೊಳಗಾಗಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸಲಹೆ ನೀಡಿದರು.
ಅಲ್ಲದೇ ಕೆಲವು ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲದಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿ ಸಿದೆ. ಅಂತಹ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಇದ್ದಲ್ಲಿ ಗುರುತಿಸುವುದು. ಅಥವಾ ಖಾಸಗಿ ವ್ಯಕ್ತಿಗಳು ಇಲಾಖೆಗೆ ಭೂಮಿ ಪರಭಾರೆ ಮಾಡುವವರಿ ದ್ದಲ್ಲಿಯೂ ವಿಚಾರಿಸಿ, ಜಿಲ್ಲಾಧಿಕಾರಿ ಗಳ ಕಾರ್ಯಾಲಯಕ್ಕೆ ಮಾಹಿತಿ ನೀಡ ಬೇಕು. ಈ ಬಗ್ಗೆ ಎಲ್ಲಾ ತಹಶೀಲ್ದಾರರು ಗಮನಹರಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸೋಂಕಿತರ ತಪಾಸಣೆ ಮತ್ತು ಚಿಕಿತ್ಸಾ ಕ್ರಮ ಅಡ್ಡಿ ಆತಂಕಗಳಿ ಲ್ಲದೆ ಮುಂದುವರೆಯುತ್ತಿರುವುದಕ್ಕೆ ಶ್ರಮಿಸುತ್ತಿರುವ ಸಂಬಂಧಿತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಸಾರ್ವಜನಿಕರು ಸೋಂಕು ತಗುಲದಂತೆ ಸರ್ಕಾರ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ವಿಶೇಷವಾಗಿ ಮಾರುಕಟ್ಟೆಯಂತಹ ಪ್ರದೇಶದಲ್ಲಿ ಸೋಂಕಿತರು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಸೋಂಕು ಹರಡು ವುದು ತರವಲ್ಲ. ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸು ವುದು ಅನಿವಾರ್ಯ ಎಂದರು.
ಕೋವಿಡ್‌ಗೆ ಸಂಬಂಧಿಸಿದಂತ ದೈನಂದಿನ ಮಾಹಿತಿಗಳನ್ನು ನಿಗಧಿತ ಆಪ್‌ನಲ್ಲಿ ಅಪ್‌ಡೇಟ್ ಮಾಡು ವಂತೆ ಹಾಗೂ ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರ ಭೇಟಿ ಕಾರ್ಯ, ಪ್ರಾಥಮಿಕ ಸಂಪರ್ಕ ಹೊಂದಿರುವವ ಮಾಹಿತಿ ಉನ್ನತೀಕರಿಸುವ ಕಾರ್ಯ ನಿರೀಕ್ಷೆ ಯಂತಾಗಿಲ್ಲ. ನಿಯೋಜಿತ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸದೆ ತ್ವರಿತಗತಿ ಯಲ್ಲಿ ಭೇಟಿ ಕಾರ್ಯ ಪೂರ್ಣ ಗೊಳಿಸಿ ವರದಿ ನೀಡುವಂತೆ ಸೂಚಿಸಿದ ಅವರು, ಸಾರ್ವಜನಿಕರು ಮಾಸ್ಕ್ ಹಾಕದಿರುವವರಿಗೆ ದಂಡ ಹಾಕುವಲ್ಲಿ ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿವೆ. ಈಗಾಗಲೆ ಕೊರೋನ ನಿಯಂತ್ರಣಕ್ಕಾಗಿ ಬಿಡುಗಡೆ ಯಾಗಿರುವ ಅನುದಾನ, ಬಳಕೆ, ಬೇಡಿಕೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ಕೂಡಲೇ ಗಣಕೀಕರಣಗೊಳಿಸಿ ಮಾಹಿತಿ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ಶೇ.೮೮ರಷ್ಟು ಬೆಳೆ ಸಮೀಕ್ಷೆ ನಡೆದಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಿ ತ್ವರಿತಗತಿಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ತಹಶೀಲ್ದಾರರು ಈ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಿದರು.
ಕಳೆದೆರಡು ತಿಂಗಳಲ್ಲಿ ಆಗಿರುವ ಬೆಳೆ ನಷ್ಟದ ಕುರಿತು ಇಲಾಖೆಗಳು ನಿಗಧಿಪಡಿಸಿದ ದಿನಾಂಕದೊಳಗಾಗಿ ಬೆಳೆ ಪರಿಹಾರ ದಾಖಲೆಗಳನ್ನು ಒದಗಿಸುವಂತೆ ಹಾಗೂ ಕಳೆದ ಸಾಲಿನಲ್ಲಿ ಮಳೆಯಿಂದ ಮನೆ ಹಾನಿ ಗೊಳಗಾಗಿರುವ ಸಂತ್ರಸ್ಥರು ಮನೆ ಕಟ್ಟಿಕೊಳ್ಳುವ ಕಾರ್ಯ ಕೂಡಲೇ ಆರಂಭಿಸುವಂತೆ ನೋಟೀಸ್ ನೀಡಿ. ಪ್ರತಿಕ್ರಿಯಿಸದಿದ್ದಲ್ಲಿ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ಕಂದಾಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.