ಗ್ರಾಮೀಣ ಸೊಬಗಿನ ಜನಪದ ಕೋಗಿಲೆ….

370

ಕರ್ನಾಟಕವನ್ನು ವೈವಿಧ್ಯಮಯ ಮತ್ತು ಸಾಂಸ್ಕೃತಿಕ ತವರೂರು ಎಂದು ಹೇಳಬಹುದು. ಏಕೆಂದರೆ ಪ್ರಾಚೀನ ಕಾಲದಿಂದಲೂ ಅನೇಕ ರಾಜಮನೆತನಗಳು ಕರ್ನಾಟಕನ ಆಳ್ವಿಕೆ ಮಾಡಿ ತಮ್ಮದೇ ಆದ ಸಾಮ್ರಾಜ್ಯವನ್ನು ಹುಟ್ಟಿ ಬೆಳೆಸಿ ಅವನತಿಗೊಂಡಿರುವ ಸನ್ನಿವೇಶ ನೋಡಬಹುದು.
ಆದರೆ ರಾಜ ಮತ್ತು ಅರಸ, ರಾಣಿಯರು, ರಾಜ್ಯ ಮತ್ತು ಪ್ರಾಂತ್ಯದ ಕಾರ್ಯವೈಖರಿಯನ್ನು ವೈಭವೀಕರಿಸುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಹಳ್ಳಿಗಾಡಿನ ಜನರು ರಾಜರನ್ನು ಕುರಿತು ಅನೇಕ ಲಾವಣಿ ಪದಗಳು, ಗೀಗೀ ಪದಗಳು, ಜನಪದ ಪದಗಳು ನಾಟಕ ನೃತ್ಯ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ರಾಜ್ಯದ ಸಂಸ್ಕೃತಿಯನ್ನು ಬೆಳೆಸಿ ಉಳಿಸಿಕೊಂಡು ಬಂದಿರುವ ಕಲೆಯನ್ನು ನೋಡಬಹುದು.
ಹಾಗೆಯೇ ಇಂದಿನ ಯುಗ ಪೀಳಿಗೆಯಲ್ಲಿ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕಲೆ ಇಂದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸೀಮಿತವಾಗಿದೆ.
ಅಂತಹ ಪ್ರತಿಭೆ ದಾವಣಗೆರೆ ಜಿ ದಾವಣಗೆರೆ ತಾಲೂಕಿನ ಚಿನ್ನಸಮುದ್ರ ಗ್ರಾಮದ ಉಮೇಶ ನಾಯ್ಕ. ಇವರನ್ನು ಜನಪದ ಕೋಗಿಲೆ ಎಂದು ಕರೆಯುತ್ತಾರೆ. ಏಕೆಂದರೆ ಹಳ್ಳಿಹಳ್ಳಿಗಳಲ್ಲಿ ಇವರ ಕಂಠಸಿರಿಯ ಧ್ವನಿಯ ಮೂಲಕ ಹೊರಡುವ ಜನಪದ ಗೀತೆಗಳು ಜನರಲ್ಲಿ ಮನಸೂರೆಗೊಂಡಿವೆ
ಜನಮನ ಗೆದ್ದ ಜನಪದ ಕಲಾವಿದ:
ದಾವಣಗೆರೆ ತಾಲ್ಲೂಕಿನ ಚಿನ್ನಸಮುದ್ರ ಎಂಬ ಪುಟ್ಟ ಗ್ರಾಮದಲ್ಲಿ ೧೯೮೨ ಜೂನ್ ೧೨ ರಂದು ಜನಿಸಿದ ಇವರು, ಬಾಲ್ಯದಿಂದಲೇ ತನ್ನ ತಂದೆಯ ಜೊತೆಗೂಡಿ ತನ್ನ ತಂದೆಯನ್ನು ಗುರುವನ್ನಾಗಿಸಿಕೊಂಡು ತನ್ನ ವೃತ್ತಿಯ ಜೊತೆಗೆ ಕಲೆಯನ್ನ ಬೆಳೆಸಿಕೊಂಡರು.
ಉಮೇಶ್ ತನ್ನ ಬಾಲ್ಯದಲ್ಲಿ ಶಾಲೆಯಲ್ಲಿ ವಿದ್ಯೆಗೆ ಆದ್ಯತೆ ನೀಡದೆ ಹಾಡುಗಾರಿಕೆಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿ, ಜನಪದವನ್ನೇ ತನ್ನ ಉಸಿರನ್ನುನಾಗಿಸಿಕೊಂಡರು. ಪ್ರತಿವರ್ಷ ಗಣೇಶ ಚತುರ್ಥಿಯ ದಿನದಂದು ತಮ್ಮ ಊರಿನಲ್ಲಿ ಜನಪದ ಗೀತೆಗಳನ್ನು ಹಾಡುವ ಮೂಲಕ ಜನರಮನ ಗೆದ್ದು ಹೆಸರುವಾಸಿಯಾದ ಇವರು ಪ್ರಮುಖವಾಗಿ ತಮಟೆ, ತಬಲ, ಹಾಮೆನಿಯಂ ಇತ್ಯಾದಿ ಪರಿಕರಗಳನ್ನು ಬಳಸಿ ಯಾವುದೇ ಸಂಗೀತ ಶಾಲೆಯಲ್ಲಿ ಕಲಿಯದೆ ತಮ್ಮ ಕಂಠಸಿರಿಯ ಮೂಲಕ ಜನಪದ ಗೀತೆ ಲಾವಣಿ ಪದ ಸುಗ್ಗಿಯ ಪದಗಳಲ್ಲಿ ರಾಗಿಯ ಕೊಯ್ಲಿಗೆ ಭತ್ತದ ಕೊಯ್ಲಿಗೆ ರಾಜ ರಾಣಿ ಅರಸ ಇವರಿಗೆ ಸಂಬಂಧಪಟ್ಟ ಹಾಡುಗಳನ್ನು ಕಟ್ಟಿ ಹಾಡುಗಾರಿಕೆ ಹಾಡುವ ಕೋಗಿಲೆ ಉಮೇಶ್ ಅವರು ಸುಮಾರು ೨೮ ವರ್ಷಗಳ ಕಾಲ ನಿರಂತರವಾಗಿ ಜನಪದ ಗೀತೆಗಳನ್ನು ಹಾಡುತ್ತ ಬಂದಿದ್ದು, ಜನಪದ ಕೋಗಿಲೆ ಎಂದೇ ಖ್ಯಾತಿ ಪಡೆದಿದ್ದಾರೆ.
ಶ್ರೀಗಳಿಂದ ಶ್ರೀರಕ್ಷೆ :
ದಾವಣಗೆರೆ ನಗರದ ವಿರಕ್ತ ಮಠದ ಶ್ರೀ ಬಸವಪ್ರಭು ಮಹಾ ಸ್ವಾಮಿಗಳು, ಉಮೇಶರವರ ಕುರಿತು ಅನೇಕ ಸಂದೇಶವನ್ನು ನೀಡಿzರೆ. ನಾಡು-ನುಡಿ ಕಲೆಗಾಗಿ ತಮ್ಮ ಸೇವೆಯನ್ನು ಹಾಗೂ ಪ್ರತಿ ತಿಂಗಳು ಮುರುಘಾಮಠದಲ್ಲಿ ಹಾಗು ವಿರಕ್ತಮಠದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಪ್ರತಿಭೆಯಾದ ಉಮೇಶರವರನ್ನು ಕರಿಸಿ ಜನಪದ ಗೀತೆಗಳನ್ನು ಕೇಳುವಂತ ಸಂತೋಷದ ಸಮಯವನ್ನು ಭಕ್ತಾದಿಗಳಿಗೆ ಉಣಬಡಿಸುವ ಕಾರ್ಯವನ್ನು ಶ್ರೀಮಠದಿಂದ ನೀಡುತ್ತಿದ್ದೇವೆ. ಇಂತಹ ಪ್ರತಿಭೆಗೆ ಪ್ರತಿಯೊಬ್ಬರ ಸಹಕಾರ ಸಹಾಯ ಅಗತ್ಯವಾಗಿದೆ ಎಂದು ಆಶೀರ್ವದಿಸುವ ಮೂಲಕ ಸಂದೇಶವನ್ನು ನೀಡಿzರೆ.
ಕಲಾವಿದನಿಗೆ ಸಂದ
ಕಲಾ ಸೇವಾ ಪ್ರಶಸ್ತಿಗಳು:
ಶ್ರೀಯುತ ಉಮೇಶ್ ನಾಯ್ಕ್ ಜನಪದ ಗೀತೆಯ ಗ್ರಾಮೀಣ ಪ್ರತಿಭೆಯಾಗಿದ್ದರು. ತಾಲೂಕು ಮತ್ತು ಜಿ ಹಾಗೂ ರಾಜ್ಯ ಹಾಗೆಯೇ ಅಂತರ್ ರಾಜ್ಯಗಳಾದ ತೆಲಂಗಾಣ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ತಮ್ಮ ಜನಪದ ಸೇವೆಯನ್ನು ಸಲ್ಲಿಸುವ ಕಾರ್ಯವನ್ನು ಗುರುತಿಸಿ ಅನೇಕ ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಅಕಾಡೆಮಿ, ಹೀಗೆ ಹಲವಾರು ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಮೈಸೂರು ದಸರಾ ಪ್ರಶಸ್ತಿ, ಜನಪದ ಸುಗ್ಗಿ ಪ್ರಶಸ್ತಿ, ಗ್ರಾಮೀಣ ಸಿರಿ ಪ್ರಶಸ್ತಿ, ಕಲಾ ಸಿರಿ ಪ್ರಶಸ್ತಿ, ಸಿರಿನಾಡು ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ ಹಾಗೂ ಚಿತ್ರದುರ್ಗ ಜಿಯ ಆಕಾಶವಾಣಿಯ ಕೇಂದ್ರದಲ್ಲಿ ಆಡಿರುವ ಪ್ರಸಂಗವೂ ಹೀಗೆ ಸುಮಾರು ೨೦೦ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ಗ್ರಾಮೀಣ ಪ್ರತಿಭೆಯಾಗಿದ್ದಾರೆ.
ಜನಪದ ಕಲೆ ಉಳಿಸಿ:
ಇಂದಿನ ಪೀಳಿಗೆಯ ಯುವಕರು ನಮ್ಮ ನಾಡು ನುಡಿಯ ಪರಂಪರೆಯ ವೈಭವವನ್ನು ಉಳಿಸಬೇಕಾದರೆ ಜನಪದ ಶೈಲಿಯನ್ನು ಅದರ ಉಸಿರನ್ನು ನಾವೆಲ್ಲರೂ ಸಂರಕ್ಷಣೆ ಮಾಡಬೇಕು ಎಂಬ ಸಂದೇಶವನ್ನು ನೀಡಿzರೆ.
ಇಂತಹ ಕಲಾವಿದರು ಆರ್ಥಿಕ ವಾಗಿ ಹಿಂದುಳಿದರು ತಮ್ಮ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಪ್ರಯತ್ನ ಪಡುತ್ತಿzರೆ. ಹಾಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಲಾವಿದರಿಗೆ ಸಿಗುವಂತಹ ಸೌಲಭ್ಯಗಳು ಇಂಥ ಗ್ರಾಮೀಣ ಪ್ರದೇಶದಲ್ಲಿ ಇರುವಂತ ಕಲಾವಿದರಿಗೆ ಸಿಗುವಂತಾಗಲಿ. ಏಕೆಂದರೆ ಯಾವುದೇ ಪ್ರಶಸ್ತಿ ಮತ್ತು ಸನ್ಮಾನಗಳು ನಮ್ಮ ಜೀವನವನ್ನು ನಡೆಸುವುದಿಲ್ಲ . ಕೊರೋನ ಸಂದರ್ಭದಲ್ಲಿ ಆರ್ಥಿಕವಾಗಿ ಕಷ್ಟ ನೋವು ಅನುಭವಿಸಿರುವ ಇಂಥ ಕಲಾವಿದರಿಗೆ ಸರಕಾರವು ಆರ್ಥಿಕವಾಗಿ ಇವರಿಗೆ ಸಹಾಯ ನೀಡಬೇಕು. ಜನಪದ ಸಾಹಿತ್ಯದ ಅಭಿರುಚಿ ಹೊಂದಿರುವ ಪ್ರತಿಯೊಬ್ಬ ಸಾಹಿತಿಗಳು ಕೂಡ ಇಂಥ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ನಾವೆಲ್ಲರೂ ಸೇರಿ ಕೈಗೊಂಡಾಗ ಮಾತ್ರ ಜನಪದವನ್ನು ಉಳಿಸುವಂತಹ ಕಾರ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಕಲಾಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಮುಕ್ತ ಮನಸ್ಸಿನಿಂದ ಮುಂದೆ ಬರಬೇಕಿದೆ.

ರವಿಕುಮಾರ್ ಎಚ್ ಈ ಉಪನ್ಯಾಸಕರು