ಗೋಹತ್ಯೆ ಮಸೂದೆ ಮಂಡನೆ ನಿಶ್ಚಿತ…

400

ಸಾಗರ: ಗೋಹತ್ಯೆ ನಿಷೇಧ ಮಸೂದೆಯನ್ನು ಈ ಬಾರಿ ಅಧಿವೇಶನದಲ್ಲಿ ಮಂಡಿಸಲಿದ್ದು ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಕುರಿತ ಮಸೂದೆಯನ್ನೂ ಸಹ ಮಂಡಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
ಈ ಮೊದಲು ಗೋಹತ್ಯೆ ನಿಷೇಧವನ್ನ ಅಂಗೀಕರಿಸುವಂತೆ ಸದಸನ ಸಮಿತಿ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ಬಾರಿ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುವುದು. ರಾಜ್ಯಪಾಲರ ಒಪ್ಪಿಗೆ ದೊರೆಯುವ ಭರವಸೆ ಇದೆ. ಆದರೆ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಮಸೂದೆಯನ್ನ ಮಂಡಿಸಲಾಗುವುದು ಈ ಬಾರಿ ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಳೆ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಪ್ರಧಾನಿ ಮೋದಿಯವರೆ ಬಂದ್ ಮಾಡದಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪದೇ ಪದೇ ಬಂದ್‌ಗೆ ಕರೆ ನೀಡಿದರೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಭಾರತ ಬಂದ್‌ನಂತಹ ಕಠಿಣ ನಿರ್ಧಾರ ಕೈಹೊಳ್ಳುವುದು ಸರಿಯಲ್ಲ. ಹಾಗಾಗಿ ರೈತರು ಸರ್ಕಾರದ ಜೊತೆಗೆ ಕುಳಿತು ಸಮಸ್ಯೆ ಬಗೆಹರಿಸಿಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಇಂದಿನಿಂದ ಅಧಿವೇಶನ ಆರಂಭ ಗೊಂಡಿದೆ. ಅನೇಕ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ. ಈ ಬಾರಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದರು.
೩೦ ಕೋಟಿರೂ. ಬಿಡುಗಡೆ:
ನಂತರ ಅವರು ಸಾಗರದ ನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಸದ ಬಿ.ವೈ ರಾಘವೇಂದ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮಕಾರ್ಯ ನಡೆಸಿದ್ದಾರೆ. ಸಾಗರ ನಗರ ಸೊರಬ ಮಾರುಕಟ್ಟೆ ರಸ್ತೆ ಅಗಲೀಕರಣಕ್ಕೆ ೬೦ ಕೋಟಿ ಬೇಡಿಕೆ ಇಡಲಾಗಿದೆ. ತಕ್ಷಣಕ್ಕೆ ಮೊದಲು ೩೦ ಕೋಟಿ ಬಿಡುಗಡೆ ಮಾಡಲಿದ್ದೇನೆ ಎಂದರು.
ಜೋಗ ಜಲಪಾತಕ್ಕೆ ೧೨೦ ಕೋಟಿ ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಭರದಿಂದ ಸಾಗುತ್ತಿದೆ, ಸಾಗರ ಭಾಗದಲ್ಲಿ ಪ್ರವಾಸೋಧ್ಯಮಕ್ಕೆ ಶಕ್ತಿ ತುಂಬಲಿದೆ. ತುಮರಿ ಸೇತುವೆ ಕಾಮಗಾರಿಯೂ ಭರದಿಂದ ನಡೆಯು ತ್ತಿದೆ. ಸಾಗರ ಪಟ್ಟಣದಲ್ಲಿ ಕುಡಿಯುವ ನೀಡಗೆ ಕ್ರಮ ಕೈಗೊಳ್ಳಲಾಗಿದೆ, ಶಾಸಕ ಹರತಾಳ ಹಾಲಪ್ಪನವರ ಜೊತೆ ಚರ್ಚಿಸಿದ್ದೇನೆ. ಸಾಗರದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಮಾದರಿ ತಾಲೂಕು ಮಾಡಲಿದ್ದೇನೆ ಎಂದರು.
ಹಣಕಾಸಿನ ಇತಿಮಿತಿ ನೋಡಿ ಕೊಂಡು ಹಣ ಬಿಡುಗಡೆ ನಾಡಲಿದ್ದೇನೆ. ಮನೆ ಕಳೆದುಕೊಂಡವರು ಮನೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ. ಮನೆ ಬೇಕು ಎಂಬುವರ ಪಟ್ಟಿಕೊಡಿ. ನಂತರ ಅದರ ಬಿಡುಗಡೆ ಮಾಡಲಿದ್ದೇನೆ ಎಂದರು.
ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.