ಗುರುಕುಲ ಪಿ ಯು ಕಾಲೇಜಿಗೆ ಶೇ.೯೦.೬೨ ಫಲಿತಾಂಶ

488

ಹೊನ್ನಾಳಿ: ಮಾರ್ಚ್‌ನಲ್ಲಿ ನಡೆದ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಹೊರವಲಯದ ಬೃಂದಾವನ ದಲ್ಲಿರುವ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ೩೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ೨೯ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.೯೦.೬೨ ಫಲಿತಾಂಶ ಬಂದಿದೆ.
ಡಿಸ್ಟಿಂಕ್ಷನ್‌ನಲ್ಲಿ ೬, ಪ್ರಥಮ ದರ್ಜೆಯಲ್ಲಿ ೧೯, ದ್ವಿತೀಯ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿzರೆ. ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.