ಗಣಪತಿ ಬ್ಯಾಂಕಿನಿಂದ ಕೊರೋನಾ ಪರಿಹಾರ ನಿಧಿಗೆ ಆರ್ಥಿಕ ನೆರವು

617

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರದ ಪ್ರತಿಷ್ಠಿತ ಶ್ರೀ ಗಣಪತಿ ಪಟ್ಟಣ ಸಹಕಾರ ಬ್ಯಾಂಕಿನ ವತಿಯಿಂದ ಮುಖ್ಯಮಂತ್ರಿಗಳ (ಕೋವಿಂಡ್-19) ಪರಿಹಾರ ನಿಧಿಗೆ ರೂ. 1,00,000-00 ಗಳ ಚೆಕ್ ನ್ನು ಸಾಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೂಲಕ ಬುಧವಾರ ನೀಡಲಾಯಿತು.

ಈ ಕುರಿತು ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎಸ್ ಗಜಾನನ ಜೋಯ್ಸ್, ರಾಜ್ಯಕ್ಕೆ ಅಥವಾ ದೇಶಕ್ಕೆ ಈ ಹಿಂದೆ ಪ್ರಕೃತಿ ವಿಕೋಪವಾದಾಗಲೂ ಸಹ ಬ್ಯಾಂಕ್ ಆರ್ಥಿಕ ನೆರವು ನೀಡಿದೆ ಎಂದು ತಿಳಿಸಿದರು. ದೇಶದಾದ್ಯಂತ ಈ ಹಿಂದೆ ಪ್ರಕೃತಿ ವಿಕೋಪದಿಂದ ಎಲ್ಲೆಡೆ ನೆರೆ ಬಂದಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಆರ್ಥಿಕ ನೆರವು ನೀಡಲಾಗಿತ್ತು ಎಂದು ಹೇಳಿದರು.

ರಾಜ್ಯ, ದೇಶ ಹಾಗೂ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಂಡ್-19 ವೈರಸ್ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದೈವದ ಮೊರೆ ಹೋಗುವುದು ಅನಿವಾರ್ಯವಾಗಿದ್ದು, ನಾಡಿನ ಸಮಸ್ತ ಜನತೆ ಸಕಲ ಗಣಗಳಿಗೆ ಅಧಿಪತಿಯಾದ ಗಣಪತಿಯನ್ನು ಪ್ರಾರ್ಥನೆ ಮಾಡುವ ಮೂಲಕ ಈ ವೈರಸ್ ನ್ನು ದೂರ ಮಾಡಬೇಕಿದೆ ಎಂದರು.

 

ಸ್ವಾಗತ ಭಾಷಣ ಮಾಡಿದ ಬ್ಯಾಂಕಿನ ನಿರ್ದೇಶಕ ವಿ.  ಶಂಕರ್, ಸರ್ಕಾರಗಳು ಈ ಕುರಿತಂತೆ ನೀಡುವ ಎಲ್ಲಾ ಮಾನದಂಡಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸರಸ್ವತಿ ನಾಗರಾಜ್, ನಿರ್ದೇಶಕರಾದ ಬಿ. ದೇವೇಂದ್ರ, ಕೃಷ್ಣಮೂರ್ತಿ ಭಂಡಾರಿ, ಎಂ.ಎಸ್. ಗೌಡರ್, ಶೋಭಾ ಲಂಬೋಧರ, ನಾರಾಯಣ, ಉದಯಕಾಮತ್, ಶ್ರೀನಿವಾಸ್, ಎಸ್.ಎಂ.ರಮೇಶ್, ಬ್ಯಾಂಕಿನ ಸಿ.ಇ.ಓ. ಬಿ. ಲಲಿತಾಂಬಿಕೆ ಹಾಜರಿದ್ದರು.