ಖಾಸಗೀಕರಣ ಅವೈಜ್ಞಾನಿಕ

477

ಸಾಗರ: ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವ ನೀತಿಯನ್ನು ಖಂಡಿಸಿ ಕ.ವಿ.ಪ್ರ.ನಿ. ನೌಕರರ ಸಂಘ ಮತ್ತು ಇತರೆ ಅಸೋಶಿಯೇಷನ್‌ಗಳ ಒಕ್ಕೂಟದಿಂದ ಮೆಸ್ಕಾಂ ಎದುರು ಅಧಿಕಾರಿ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಕೇಂದ್ರ ಸರ್ಕಾರ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿ ರುವ ನೀತಿ ಅತ್ಯಂತ ಅವೈeನಿಕ ವಾಗಿದೆ. ೨೦೦೩ರಿಂದ ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ವಿದ್ಯುತ್ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಿ ಕೊಟ್ಟರೇ ಇದನ್ನು ನಂಬಿಕೊಂಡ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ರಾಜದ್ಯಂತ ಇರುವ ಮೆಸ್ಕಾಂ ಸೇರಿದಂತೆ ಬೇರೆಬೇರೆ ಕಂಪನಿಗಳು ಉತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಸೌಲಭ್ಯವನ್ನು ನೀಡುತ್ತಿದೆ. ಆದರೂ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಕಂಪನಿ ಗಳನ್ನು ಖಾಸಗಿಯವರಿಗೆ ವಹಿಸಿ ಕೊಡಲು ಚಿಂತನೆ ನಡೆಸಿರುವುದು ದುರದಷ್ಟಕರ. ಒಂದೊಮ್ಮೆ ಖಾಸಗಿ ಯವರಿಗೆ ವಹಿಸಿಕೊಟ್ಟರೆ ಬಡ ಗ್ರಾಹಕರು ತೀವ್ರ ಸಮಸ್ಯೆ ಎದುರಿಸು ತ್ತಾರೆ. ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಬಾರದು. ನಮ್ಮ ಕಂಪನಿಗಳಿಗೆ ಹೆಚ್ಚಿನ ಸೌಲಭ್ಯ ನೀಡಿದರೆ ಇನ್ನಷ್ಟು ಉತ್ತಮವಾದ ಸೇವೆ ಗ್ರಾಹಕರಿಗೆ ತಲುಪಿಸುತ್ತೇವೆ ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್ ಮಾತನಾಡಿ, ಈಗಾಗಲೆ ಕೆಲವು ರಾಜ್ಯಗಳಲ್ಲಿ ವಿದ್ಯುತ್ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಿ ಅಲ್ಲಿನ ವಿದ್ಯುತ್ ಗ್ರಾಹಕರು ತೀವವಾದ ಸಂಕಷ್ಟ ಎದುರಿಸುತ್ತಿzರೆ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಖಾಸಗೀಕರಣ ಕೈಬಿಡುವಂತೆ ಪ್ರತಿಭಟನೆ ಸಹ ನಡೆಯುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿ ಗಳು ವಿದ್ಯುತ್ ಪ್ರಸರಣ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಲಾಗದೆ ಓಡಿ ಹೋಗಿವೆ. ಇಂತಹ ಸಂದರ್ಭ ದಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಸಂಸ್ಥೆಗಳ ಖಾಸಗೀಕರಣಕ್ಕೆ ಚಿಂತನೆ ನಡೆಸಿರುವುದು ಸರಿಯಲ್ಲ. ತಕ್ಷಣ ಈ ಅವೈeನಿಕ ಚಿಂತನೆ ಕೈಬಿಡುವಂತೆ ಒತ್ತಾಯಿಸಿದರು.
ಮೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಲ್.ಶ್ರೀಧರ್ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೆ ರಾಜ್ಯ ಸರ್ಕಾರಕ್ಕೆ ಖಾಸಗೀಕರಣಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆಯನ್ನು ಕಳಿಸಿಕೊಟ್ಟಿದೆ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಈ ಪ್ರಸ್ತಾವನೆಯನ್ನು ಒಪ್ಪಬಾರದು. ರಾಜ್ಯದ ಬೇರೆಬೇರೆ ವಿದ್ಯುತ್ ಕಂಪನಿಗಳಲ್ಲಿ ಲಕ್ಷಾಂತರ ನೌಕರರು ಕೆಲಸ ಮಾಡುತ್ತಿzರೆ. ಇವರನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಮೆಸ್ಕಾಂ ನೌಕರರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳಾದ ಚನ್ನಕೇಶವ, ಉಮೇಶ್, ನಂದೀಶ್, ನೌಕರರ ಸಂಘದ ಮಂಜುನಾಥ್, ಗವಿಸಿದ್ದಪ್ಪ, ಮಹಾಬಲೇಶ್, ಹರೀಶ್, ದುರ್ಗಪ್ಪ, ಶ್ರೀನಿವಾಸ್, ಸೆಲೆಸ್ಟಿನ್, ಸವಿತಾ ಇನ್ನಿತರರು ಹಾಜರಿದ್ದರು.