ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸಂತೇಬೆನ್ನೂರು ಸರ್ಕಾರಿ ಶಾಲೆ

600

ಶಿವಮೊಗ್ಗ : ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಿಕ್ಷಣವನ್ನು ನೀಡುತ್ತಿದೆ.
ನಹೀeನೇನ ಸದಶಂ ಎಂಬ ಮಾತೊಂದಿದೆ. ಆ ನಿಟ್ಟಿನಲ್ಲಿ eನ ಹೊರತಾಗೇನೂ ಇಲ್ಲ ಎಂಬ ತತ್ವ ಪಾಲಿಸಿಕೊಂಡು ಬರುತ್ತಿರುವ ಸಣ್ಣ ಶೈಕ್ಷಣಿಕ ಕಥಾನಕ ಈ ವರದಿ.
ಇದು ಕರ್ನಾಟಕ ಪಬ್ಲಿಕ್ ಸರ್ಕಾರಿ ಪ್ರೌಢಶಾಲೆ ಸಂತೆಬೆನ್ನೂರು, ಚನ್ನಗಿರಿ ತಾ, ದಾವಣಗೆರೆ ಜಿಯ ಈ ಶಾಲೆ ವಿಶಿಷ್ಟ ಕಾರಣದಿಂದ ಗಮನ ಸೆಳೆಯುತ್ತಿದೆ. ಇದು ತುಂಬಾ ಹಳೆಯದಾದ ಶಾಲೆ. ೧೯೪೮ರಲ್ಲಿ ಶ್ರೀ ಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಆರಂಭಗೊಂಡ ಶಾಲೆ. ಸುತ್ತಮುತ್ತಲಿನ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಶಿಕ್ಷಣ ಕೇಂದ್ರವಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರದ ಅಧೀನಕ್ಕೆ ಒಳಪಟ್ಟು ಸ್ವಾಮೀಜಿಯವರ ಹೆಸರ ಜೊತೆಯಲ್ಲಿ ‘ಸರ್ಕಾರಿ ಪ್ರೌಢಶಾಲೆ’ ಎಂದು ಬದಲಾಗಿ ವಿದ್ಯಾದಾನಕ್ಕೆ ಮುಂದಾಯಿತು.
೭೨ ವರ್ಷ ದಾಟಿ ಸಾಗುತ್ತಿರುವ ಶಾಲೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ತಳಹದಿಯೊಂದಿಗೆ eನದ ಹಸಿವನ್ನು ತಣಿಸುತ್ತಾ ಸಾಗಿದೆ. ಕಾಲ ಬದಲಾದಂತೆ ಮಕ್ಕಳು, ಶಿಕ್ಷಕರು ಬದಲಾದಂತೆ ಶಾಲೆಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಲದ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಉತ್ತಮ ಫಲಿತಾಂಶದ ಜೊತೆಗೆ ತಂತ್ರeನ, ಹೊಸ ಕಟ್ಟಡ, ನವೀನ ಶಿಕ್ಷಣ ಮೈಗೂಡಿಸಿಕೊಂಡು ಜಿಯ ಉತ್ತಮ ಶಾಲೆ ಎನ್ನಿಸಿಕೊಂಡಿದೆ.
ಕಳೆದ ಎರಡು ಮೂರು ವರ್ಷಗಳಿಂದ ‘ಒಂದೇ ಸೂರಿನಡಿ ಶಿಕ್ಷಣ’ ಎಂಬ ಸರ್ಕಾರದ ಹೊಸ ಯೋಜನೆಯ ಅನ್ವಯ ಪ್ರಾಯೋಗಿಕವಾಗಿ ಆರಂಭಗೊಂಡ’ ಕರ್ನಾಟಕ ಪಬ್ಲಿಕ್ ಸ್ಕೂಲ್’ ಪಟ್ಟಿಯಲ್ಲಿ ಸಂತೆಬೆನ್ನೂರು ಸರ್ಕಾರಿ ಪ್ರೌಢಶಾಲೆಯೂ ಸೇರಿ ನಾವಿನ್ಯತೆಗೆ ಒಗ್ಗಿಕೊಂಡು ಶೈಕ್ಷಣಿಕ ಪ್ರಗತಿ ಮಾಡುತ್ತಿದೆ.
ಕಾಲನ ಹೊಡೆತಕ್ಕೆ ಸಿಕ್ಕಿ ಎ ಕ್ಷೇತ್ರಗಳು ಕೋವಿಡ್-೧೯ ಅಡಿಯಲ್ಲಿ ನಜ್ಜುಗುಜಗಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದಕ್ಕೆ ಶಾಲೆಗಳೂ ಹೊರತಲ್ಲ.
ಕಳೆದ ಮಾರ್ಚ್‌ನಿಂದ ಮಕ್ಕಳು ಶಾಲೆಯ ಮುಖ ನೋಡಿಲ್ಲ. ಶಿಕ್ಷಕ ವೃಂದ ಬಂದರೂ ಒಳ ಹೋಗದೇ ಹೊರಗಿಂದ ಹೊರಗೇ ಕಾರ್ಯ ಚಟುವಟಿಕೆ ಮಾಡುತ್ತಾ ಬಂದಿzರೆ.
ಇದೀಗ ಸ್ವಲ್ಪ ಹೌದೋ ಅಲ್ಲವೋ ಅನ್ನುವಂಥ ತಣ್ಣನೆಯ ವಾತಾವರಣ ಮತ್ತು ಮಕ್ಕಳು ಶಾಲೆಗೆ ಮರಳುವ ಆಶಾಕಿರಣ ಕಾಣಿಸುತ್ತಿದೆ. ಆ ನಿಟ್ಟಿನಲ್ಲಿ ಈ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎ ಶಿಕ್ಷಕ, ಶಿಕ್ಷಕಿಯರು ಒಮ್ಮತದಿಂದ ಮುಂಬರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಡೀ ಶಾಲೆಯನ್ನು ಅಮೂಲಾಗ್ರವಾಗಿ ಶುಚಿಗೊಳಿಸುತ್ತಿzರೆ.
ತಾರಸಿ, ಗೋಡೆ, ಕೊಠಡಿಗಳು, ಅಂಗಳ, ಹಿತ್ತಲು, ಕಸಕಡ್ಡಿ ಎ ಒಪ್ಪ ಒರಣ ಮಾಡುತ್ತಿzರೆ. ಲಿಂಗ ತಾರತಮ್ಯ ಇಲ್ಲದೇ ಅನ್ನ ಕೊಡುವ ಮಕ್ಕಳ ಆಗಮನಕ್ಕೆ, ಕರೋನ ಮುಂಜಗ್ರತಾ ಕ್ರಮಕ್ಕೆ ಇಡೀ ಶಾಲೆ ಸುಂದರಗೊಳಿಸುತ್ತಿzರೆ.
ಸ್ವತಃ ಸಲಿಕೆ, ಗುದ್ದಲಿ, ಹಾರೆ ಬುಟ್ಟಿ ಹಿಡಿದು ಒಂದು ಕಡೆಯಿಂದ ಕಸ ತೆಗೆದು ಅಡ್ಡಾದಿಡ್ಡಿ ಬೆಳೆದ ಕೊಂಬೆ-ರಂಬೆಗಳಿಗೆ ಆಕಾರ ಕೊಟ್ಟು, ಅಲಂಕಾರಿಕ ಸಸಿ ನೆಟ್ಟು, ಇರುವ ಗಿಡಗಳಿಗೆ ನೀರು ನಿಲ್ಲುವ ವ್ಯವಸ್ಥೆ ಮಾಡಿ, ಗೊಬ್ಬರ ಹಾಕಿ ಮತ್ತೆ ಹೊಸ ಸಸಿ ನೆಟ್ಟು ಮುಂದಿನ ದಿನಗಳಲ್ಲಿ ಶಾಲೆ ಹಸಿರಿನಿಂದ ನಳನಳಿಸುವ ಆಲೋಚನೆ ಇಲ್ಲಿನ ಸಮಸ್ತ ಗುರು ವೃಂದದವರದು.
ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಮಾಡಿಸುವ ಆಲೋಚನೆಯೂ ಹೊಂದಿದ್ದು, ಸಧ್ಯ ಇಡೀ ಶಾಲೆಯನ್ನು ಕಸಮುಕ್ತ, ರೋಗಮುಕ್ತ, ಪ್ಲಾಸ್ಟಿಕ್ ಮುಕ್ತ ಮಾಡುವತ್ತ ಇಲ್ಲಿನ ಶಿಕ್ಷಕರು ಧಾಪುಗಾಲು ಇಡುತ್ತಿzರೆ. ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ತಾನು ಬದಲಾಗಿ, ತನ್ನ ಪರಿಸರ ಬದಲಾಯಿಸಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಬಲ್ಲ ಎನ್ನುವುದಕ್ಕೆ ಸದರಿ ಶಾಲೆಯೇ ಉತ್ತಮ ಉದಾಹರಣೆ.
ಸರ್ಕಾರಿ ಶಾಲೆ ಎಂಬ ಉದಾಸೀನ ತೊರೆದು, ಗುಣಾತ್ಮಕ ಶಿಕ್ಷಣ ಇಂದಿನ ದಿನಮಾನಗಳಲ್ಲಿ ಇಂತಹ ಶಾಲೆಗಳೇ ನೀಡುತ್ತಿವೆ ಎಂಬ ಭಾವನೆ ಮೂಡಿಸಿಕೊಂಡು ಸಮಾಜ, ಪೋಷಕರು, ಅಧಿಕಾರಿ ವರ್ಗ ಮುನ್ನಡೆದಾಗ ಸರಕಾರಿ ಶಾಲೆ ಉಳಿದಾವು. ಉಚಿತ ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳನ್ನು ಪ್ರತಿ ಪ್ರಜೆ ಪಡೆದು ಗೌರವಯುತವಾಗಿ ಬಾಳಿಯಾನು! ಕಲಿಕೆಯ ತಾಣ ಶುಚಿಯಾಗಿದ್ದಲಿ ಆರೋಗ್ಯವಂತ ಪ್ರಜೆ ರೂಪುಗೊಳ್ಳಬಲ್ಲ ಎಂಬುದು ಇಲ್ಲಿನ ಶಿಕ್ಷಕರ ಅಂಬೋಣ! ಶಾಲಾ ಮಕ್ಕಳಿಗಾಗಿ ಶಿಕ್ಷಕ ವಂದ ದುಡಿಯುತ್ತಿದೆ. ಮಕ್ಕಳು ಎಂದಾದರೂ ಬರಲಿ ಒಂದಿಷ್ಟು ಶಾಲೆಯ ಸ್ವಚ್ಛತೆ ಸಾಗುತ್ತಿದೆ.
ಒಗ್ಗಟ್ಟಿನಿಂದ ದುಡಿದರೆ ಏನಾದರೂ ಸಾಧಿಸಬಹುದು. ನಮ್ಮ ಮನೆ ಕೆಲಸ ಎಂಬಂತೆ ಶಾಲೆಯ ಶುದ್ಧತೆ ಮಾಡುತ್ತಿರುವ ಶಿಕ್ಷಕರಾದ ಸಂತೆಬೆನ್ನೂರು ಫೈಜ್ನಟ್ರಾಜ್, ಮಂಜಪ್ಪ, ಸವಿತಾ, ವೀಣಮ್ಮ ಮತ್ತು ಅವರ ಸಹೋದ್ಯೋಗಿಗಳು ಕರೋನಾ ಮುಕ್ತ ಶಾಲೆಯನ್ನಾಗಿಸಲು ಶ್ರಮಪಡುತ್ತಿzರೆ.
ಸಾರ್ವಜನಿಕರು ಒಮ್ಮೆ ಸಂತೇಬೆನ್ನೂರು ಸರ್ಕಾರಿ ಶಾಲೆಗೆ ಭೇಟಿ ನೀಡಬೇಕಾಗಿ ಶಿಕ್ಷಕ ಸಂತೆಬೆನ್ನೂರು ಫೈಜ್ನಟ್ರಾಜ್ ಕೋರಿzರೆ.
– ಮುರುಳೀಧರ್ ಹೆಚ್ ಸಿ
ಹವ್ಯಾಸಿ ಬರಹಗಾರರು,ಶಿವಮೆಗ್ಗ.