ಖಾಸಗಿ ಟಿ ವಿ ವಾಹಿನಿ ನೇರಪ್ರಸಾರ ಕಾರ್ಯಕ್ರಮಕ್ಕೆ ಸರ್ಕಾರ ತಡೆ ಹಿಂಪಡೆಯಲು ಆಗ್ರಹಿಸಿ ಮನವಿ

443

ದಾವಣಗೆರೆ: ಪವರ್ ಟಿವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮ ತಡೆಹಿಡಿದಿರುವುದು ಸರಿಯಲ್ಲ, ಕೂಡಲೇ ರಾಜ್ಯ ಸರ್ಕಾರ ತಡೆಯನ್ನು ಹಿಂಪಡೆಯಬೇಕು ಎಂದು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಅರ್ಪಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಮಾತನಾಡಿ, ಕೋವಿಡ್‌ನಿಂದ ಸಂಕಷ್ಟದಲ್ಲಿರು ಪತ್ರಿಕೋಧ್ಯಮ ವೃತ್ತಿ ಬಾಂಧವರು ಕೆಲಸಗಳಿಲ್ಲದೇ ಬೇರೆಯವರ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಕೂಡಲೇ ಮುಖ್ಯಮಂತ್ರಿಗಳು ಈ ಖಾಸಗಿ ವಾಹಿನಿಯ ನೇರ ಪ್ರಸಾರವನ್ನು ಪ್ರಸಾರ ಮಾಡಲು ಗೃಹ ಸಚಿವರಿಗೆ ನಿರ್ದೇಶನ ನೀಡಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಪತ್ರಕರ್ತರಾದ ಬಸವರಾಜ ದೊಡ್ಡಮನಿ, ಪೇಪರ್ ಚಂದ್ರಣ್ಣ, ಇ.ಎಂ.ಮಂಜುನಾಥ, ಮಾಗನೂರು ಮಂಜಪ್ಪ, ವಿವೇಕಾನಂದ ಬದ್ದಿ, ಆರ್.ಎಸ್. ತಿಪ್ಪೇಸ್ವಾಮಿ, ಜೆ.ಎಸ್. ವೀರೇಶ, ಎಂ.ಎಸ್.ಚನ್ನಬಸವ, ವಿ.ಬಿ.ಅನಿಲ ಕುಮಾರ, ರಾಮ ಪ್ರಸಾದ, ಮಲ್ಲಿಕಾರ್ಜುನ ಕೈದಾಳೆ, ಸುರೇಶ, ಡಾ.ವರದರಾಜ, ಮಧು ನಾಗರಾಜ, ಕಿರಣ್, ಹನುಮಂತು, ಕೊಟ್ರೇಶ ಅಣಬೂರು ಮಠ, ಅಣ್ಣಪ್ಪ, ಪುನಿತ್, ನಿಂಗಪ್ಪ, ಮಹಾದೇವ ಸೇರಿದಂತೆ ಪತ್ರಿಕಾ, ದೃಶ್ಯ ಮಾಧ್ಯಮದವರು ಭಾಗವಹಿಸಿದ್ದರು.