ಖಾಲಿ ನಿವೇಶನಗಳು ಕಂದಾಯ ಇಲಾಖೆ ವಶಕ್ಕೆ..

572

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಸೊರಬ: ಪಟ್ಟಣದ ಕಾನಕೇರಿ ಬಡಾವಣೆಯ ಸರ್ವೆ ನಂ. ೧೧೩ರ ಖಾಲಿ ನಿವೇಶನಗಳನ್ನು ಗುರುತಿಸಿ ತಹಶೀಲ್ದಾರ್ ಪಟ್ಟರಾಜ ಗೌಡ ನೇತೃತ್ವದಲ್ಲಿ ಕಂದಾಯ ಇಲಾಖೆಯ ವಶಕ್ಕೆ ಇಂದು ಪಡೆಯಲಾಯಿತು.
ಕಾನಕೇರಿ ಬಡಾವಣೆಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ೯೪ಸಿಸಿ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಕೆಲವರು ಅಕ್ರಮವಾಗಿ ಹೆಚ್ಚುವರಿಯಾಗಿ ಜಗವನ್ನು ಆಕ್ರಮಿಸಿಕೊಂಡು, ಬೇಲಿ ಹಾಕುವುದು ಹಾಗೂ ಚಿಕ್ಕ ಪುಟ್ಟ ಗುಡಿಸಲು ನಿರ್ಮಿಸಲು ಮುಂದಾಗಿದ್ದರು. ಇನ್ನು ಕೆಲವರು ಹೆಚ್ಚುವರಿ ಜಗವನ್ನು ಮಾರಾಟ ಮಾಡಲು ಸಹ ಯತ್ನಿಸಿದ್ದರು ಎನ್ನಲಾಗುತ್ತಿದೆ. ಇಂದು ಸಂಜೆ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ ಸುಮಾರು ೬೮ ಖಾಲಿ ನಿವೇಶನಗಳನ್ನು ಗುರುತಿಸಿ ಕಂದಾಯ ಇಲಾಖೆ ವಶಕ್ಕೆ ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್ ಅವರಿಗೆ ವಶಪಡಿಸಿಕೊಂಡ ಜಗಗಳಿಗೆ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಯಿತು.
ಸಿಪಿಐ ಆರ್.ಡಿ. ಮರುಳು ಸಿದ್ದಪ್ಪ, ಪಿಎಸ್‌ಐ ಪ್ರಶಾಂತ್ ಕುಮಾರ್, ಪಪಂ ಅಭಿಯಂತರೆ ಶೆಲ್ಜಾ ಲಾಜರ್ ಭಾಸ್ಕರ್ ರಾಜ್ ಸೇರಿ ಸಿಬ್ಬಂದಿ ಇದ್ದರು.