ಕೋವಿಡ್: ಹೊರ ರಾಜ್ಯ- ಜಿಲ್ಲೆಗಳಿಂದ ಬರುವವರ ಬಗ್ಗೆ ನಿಗಾ ಅಗತ್ಯ: ಅಶೋಕ್

647

ಹೊನ್ನಾಳಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರು ಜಗರೂಕ ರಾಗಿರಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಸಿ. ಅಶೋಕ್ ಹೇಳಿzರೆ.
ಸರಕಾರ ಜನತಾ ಕರ್ಫ್ಯೂ ಜರಿಗೊಳಿಸಿದ್ದು, ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ, ಬೆಂಗಳೂರು ಸೇರಿದಂತೆ ಬೇರೆ ರಾಜ್ಯ, ಜಿಗಳಿಂದ ಆಗಮಿಸುವವರ ಮೇಲೆ ಸಾರ್ವಜನಿಕರು ನಿಗಾ ಇಡಬೇಕು. ಹೀಗೆ ಆಗಮಿಸಿದವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗೆ ಆಗಮಿಸಿದವರ ಮಾಹಿತಿ ಯನ್ನು ಸಾರ್ವಜನಿಕರು ಆಶಾ ಕಾರ್‍ಯಕರ್ತೆಯರು ಇಲ್ಲವೇ ಪುರಸಭಾ ನೌಕರರ ಗಮನಕ್ಕೆ ತರಬೇಕು ಎಂದು ಅವರು ಮಂಗಳವಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿzರೆ.