ಕೋವಿಡ್ ಸುರಕ್ಷಾ ನಿಮಯ ಪಾಲಿಸಿ ಕ್ಷೇತ್ರದ ಜನತೆಗೆ ಎಂಪಿಆರ್ ಮನವಿ

468

ಹೊನ್ನಾಳಿ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಗೆ ಮಂಗಳವಾರ ರಾತ್ರಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ವೈದ್ಯರು ೧೪ ದಿನಗಳ ಕ್ವಾರಂಟೈನ್‌ಗೆ ಸೂಚಿಸಿದ್ದರಿಂದ ಶಾಸರು ವಿಶ್ರಾಂತಿ ಪಡೆದುಕೊಳ್ಳುತ್ತಿzರೆ.
ಎಂ.ಪಿ. ರೇಣುಕಾಚಾರ್ಯ ಶೀಘ್ರ ಕೊರೊನಾ ಗೆದ್ದು ಬರಲಿ ಎಂದು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು -ಮುಖಂಡರು ಮಂಗಳವಾರ ರಾತ್ರಿಯಿಂದಲೇ ಫೇಸ್‌ಬುಕ್, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಲತಾಣಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿzರೆ.
ತಾವು ಶಿಘ್ರವೇ ಗುಣಮುಖರಾಗಿ ಮತ್ತೆ ಜನಸೇವೆಯಲ್ಲಿ ತೊಡಗುವುದಾಗಿ ಎಂ.ಪಿ. ರೇಣುಕಾಚಾರ್ಯ ಸಂದೇಶವೊಂದರಲ್ಲಿ ತಿಳಿಸಿದ್ದು, ಕ್ಷೇತ್ರದ ಯಾವುದೇ ಜನತೆ ಕೋವಿಡ್ ಸುರಕ್ಷಾ ನಿಮಯ ಪಾಲಿಸಿ ಆರೋಗ್ಯದಿಂದಿರುವಂತೆ ಅವರು ಮನವಿ ಮಾಡಿದ್ದಾರೆ.
ಸಂತಸ ತಂದ ತೀರ್ಪು: ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಎಲ್ಲಾ ೩೨ ಆರೋಪಿಗಳನ್ನು ಘನ ನ್ಯಾಯಾಲಯವು ನಿರ್ದೋಷಿಗಳೆಂದು ಘೋಷಿಸಿರುವುದು ತಮಗೆ ಸಂತಸ ತಂದಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.