ಕೋವಿಡ್: ವಿಮಾನ ನಿರ್ಬಂಧಕ್ಕೆ ವಿಳಂಬವೇಕೆ?

99
ನವದೆಹಲಿ: ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ದೇಶಗಳ ವಿಮಾನಗಳನ್ನು ನಿರ್ಬಂಧಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಿ.೧.೧.೫೨೯ ಕೋವಿಡ್ ರೂಪಾಂತರಿ ಅಥವಾ ಓಮಿಕ್ರಾನ್‌ನ್ನು ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ರೂಪಾಂತರಿ ಎಂದು ಘೋಷಿಸಿದೆ. ಕೊರೊನಾ ವೈರಸ್‌ನ ಪ್ರಬೇಧಗಳಲ್ಲೇ ಇದು ಚಿಂತೆಗೀಡು ಮಾಡುವಂಥ ವರ್ಗಕ್ಕೆ ಸೇರಿದೆ ಎಂದು ಡಬ್ಲ್ಯೂಹೆಚ್ ತಿಳಿಸಿದೆ.
ನೂತನ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‌ನಿಂದ ಬಾಧಿತವಾಗಿ ರುವ ದೇಶಗಳಿಂದ ಭಾರತಕ್ಕೆ ಬರುವ ವಿಮಾನಗಳನ್ನು ತಕ್ಷಣದಿಂದಲೇ ನಿರ್ಬಂಧಿಸಲು ಕೇಜ್ರಿವಾಲ್ ಅವರು ಪ್ರಧಾನಿ  ಮೋದಿರನ್ನು ಆಗ್ರಹಿಸಿದ್ದರು.