ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಟಾನಕ್ಕೆ ಡಿಸಿ ಆದೇಶ

325

ದಾವಣಗೆರೆ :ಕೋವಿಡ್-೧೯ ಸೋಂಕು ಹರಡುವ ಸರಪಳಿಯನ್ನು ತಡೆಗಟ್ಟಲು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ವಿಪತ್ತು ನಿರ್ವಹಣಾ ಅಧಿನಿಯಮ ೨೦೦೫ ರ ಪ್ರಕರಣ ೨೪ರಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆದೇಶ ದಿ: ೨೬.೦೪.೨೦೨೧ ರಲ್ಲಿ ರಾಜದ್ಯಂತ ದಿ: ೨೭.೦೪.೨೦೨೧ ರಿಂದ ೧೨.೦೫.೨೦೨೧ ರವರೆಗೆ ಮಾರ್ಗಸೂಚಿಗಳ ಆದೇಶವನ್ನು ಹೊರಡಿಸಿದ್ದು, ಮಾರ್ಗಸೂಚಿಗಳು ಯಥಾವತ್ತಾಗಿ ದಿ: ೧೨.೦೫.೨೦೨೧ ರವರೆಗೆ ಜರಿಯಲ್ಲಿರುತ್ತದೆ. ಮತ್ತು ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರವು ಆದೇಶಿಸಿರುತ್ತಾರೆ.
ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷನಾಗಿ ಸರ್ಕಾರದ ಆದೇಶ ಸಂ.ಆರ್.ಡಿ ೧೫೮ ಟಿಎನ್‌ಆರ್ ೨೦೨೦ ದಿ: ೨೬.೦೪.೨೦೨೧ ರ ಲಗತ್ತು ಅನುಬಂಧ-೧, ೨, ೩ ಲ್ಲಿರುವಂತೆ ಕೋವಿಡ್-೧೯ರ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಹೊರಡಿಸಿರುತ್ತೇನೆ.
ಈ ಮಾರ್ಗಸೂಚಿಗಳು ದಿ: ೨೭.೦೪.೨೦೨೧ ರ ರಾತ್ರಿ ೯ ಗಂಟೆಯಿಂದ ದಿ: ೧೨.೦೫.೨೦೨೧ರ ಬೆಳಿಗ್ಗೆ ೬ ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಕೋವಿಡ್-೧೯ ರ ಮಾರ್ಗಸೂಚಿಗಳನ್ನು ಮತ್ತು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿ ಕೊಳ್ಳುವುದು ಸಂಬಂಧಿಸಿದ ಜಿಮಟ್ಟದ, ತಾಲ್ಲೂಕುಮಟ್ಟದ ಪ್ರಾಧಿಕಾರಗಳ ಮತ್ತು ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಮತ್ತು ಮಾರ್ಗಸೂಚಿಗಳನ್ನು ಮಹಾನಗರಪಾಲಿಕೆ/ನಗರಸಭೆ/ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಎ ಇಲಾಖಾ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸತಕ್ಕದ್ದು ಎಂದು ಜಿಧಿಕಾರಿಗಳು ಆದೇಶಿಸಿರುತ್ತಾರೆ.