ಕೋವಿಡ್ ಗೆದ್ದ ಗೌಡರಿಂದ ಕ್ಷೇತ್ರದ ಜನತೆಗೆ ಮನವಿ

410

ಹೊನ್ನಾಳಿ: ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಾಳಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಿ.ಜಿ. ಶಾಂತನಗೌಡ ಅವರು ಗುಣಮುಖ ರಾಗಿದ್ದು, ಈಗ ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿzರೆ.
ಹೊಸನಾವಿಕದೊಂದಿಗೆ ಮಾತನಾಡಿದ ಗೌಡರು, ಕೋವಿಡ್ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಶಿವಮೊಗ್ಗದ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿzರೆ.
ದೂರವಾಣಿ ಮುಖಾಂತರ ಪತ್ರಿಕೆಯೊಂದಿಗೆ ಮಾತನಾಡುತ್ತಾ ಅವರು, ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅವಳಿ ತಾಲೂಕಿನ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಗ್ರಾಮಕ್ಕೆ ಬಂದರೆ ದಯಮಾಡಿ ಕ್ಯಾಪಿಡ್ ಹಾಗೂ ಗಂಟಲಿನ ದ್ರವ ಮಾದರಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಯಾವುದೇ ಕಾಣಕ್ಕೂ ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಅಪಾಯವೇ ಹೆಚ್ಚಾಗುತ್ತದೆ ಎಂದು ಮನವಿ ಮಾಡಿzರೆ.
ವಿಶೇಷವಾಗಿ ವಯೋ ವೃದ್ದರು, ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಮೊದಲು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ ಹಾಗೂ ಮುಂಜಗ್ರತ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಬಂದವರ ಬಳಿ ಕೊರೊನಾ ಟೆಸ್ಟ್ ಮಾಡಿಸಬೇಕು. ಇತ್ತೀಚಿನ ದಿನಗಳಲ್ಲಿ ಸೋಂಕು ತಗುಲಿದರೂ ಯಾವುದೇ ರೀತಿಯ ರೋಗ ಲಕ್ಷಣ ಗೋಚರಿಸದ ಕಾರಣ ಇನ್ನೂ ಯಾರ್‍ಯಾರು ಕೊರೋನಾ ಸೋಂಕು ಟೆಸ್ಟ್ ಮಾಡಿಸಿಲ್ಲವೋ ಅಂತಹವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕಳಕಳಿಯ ಮನವಿ ಮಾಡಿzರೆ.
ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಂಡು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ ಎಂದಿದ್ದಾರೆ.