ಕೋಟೆ ದೇವಳದಲ್ಲಿ ಶ್ರೀ ಸೀತಾ ಕಲ್ಯಾಣ ಉತ್ಸವ

499

ಶಿವಮೊಗ್ಗ: ನಗರದ ಪುರಾತನ ಪ್ರಸಿದ್ಧ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಡಿ. ೨೩ರಿಂದ ೩೦ರವರೆಗೆ ಶ್ರೀ ಸೀತಾ ಕಲ್ಯಾಣ ಮಹೋತ್ಸವ, ಶ್ರೀ ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಹಾಗೂ ವಿಶೇಷ ತೆಪ್ಪೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಡಿ. ೨೩ರ ಬೆಳಿಗ್ಗೆ ಶ್ರೀ ಮಾರುತಿ ಹೋಮ, ರಾತ್ರಿ ಗರುಡೋತ್ಸವ, ಗಜೇಂದ್ರ ಮೋಕ್ಷ, ಡಿ. ೨೪ರಂದು ಬೆಳಿಗ್ಗೆ ಉತ್ಸವ ದೇವರಿಗೆ ಅಭಿಷೇಕ, ರಾತ್ರಿ ಶ್ರೀ ಸೀತಾ ಕಲ್ಯಾಣೋತ್ಸವ, ಡಿ. ೨೫ರ ರಾತ್ರಿ ವೈಕುಂಠ ದ್ವಾರ ಉದ್ಘಾಟನೆ ಹಾಗೂ ಶ್ರೀ ವೈಕುಂಠನಾಥರ ದರ್ಶನ ಕಾರ್ಯಕ್ರಮ ಜರುಗಲಿದೆ.
ಡಿ. ೨೬ರ ರಾತ್ರಿ ಬೆಳ್ಳಿ ಮಂಟಪದಲ್ಲಿ ದೇವರಿಗೆ ರಾಜಬೀದಿ ಉತ್ಸವ, ಡಿ. ೨೭ರಂದು ಬೆಳಿಗ್ಗೆ ಸುದರ್ಶನ ಹೋಮ, ರಾತ್ರಿ ಉರುಟಣೆ ಉತ್ಸವ, ಡಿ. ೨೮ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ರಾತ್ರಿ ಶಯನೋತ್ಸವ ಜರುಗಲಿದೆ.
ಡಿ. ೨೯ರಂದು ಬೆಳಿಗ್ಗೆ ಶ್ರೀ ರಾಮತಾರಕ ಹೋಮ ಅಂದು ರಾತ್ರಿ ತುಂಗಾನದಿಯಲ್ಲಿ ದೇವರ ಆಕರ್ಷಕ ತೆಪ್ಪೋತ್ಸವ ಜರುಗಲಿದೆ. ಡಿ. ೩೦ರಂದು ಬೆಳಿಗ್ಗೆ ಮಹಾಭಿಷೇಕ, ರಾತ್ರಿ ದೇವರಿಗೆ ಮೋಹಿನಿ ಅಲಂಕಾರ ಉತ್ಸವ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಹಶೀಲ್ದಾರ್ ಹಾಗೂ ಮುಜುರಾಯಿ ಅಧಿಕಾರಿ ನಾಗರಾಜ್, ಪ್ರಧಾನ ಅರ್ಚಕ ಹೊ.ನ. ಅನಂತರಾಮ್ ಅಯ್ಯಂಗಾರ್ ಕೋರಿದ್ದಾರೆ.