ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಆಯುರ್ವೇದಿಕ್ ಕಿಟ್ ವಿತರಣೆ

499

ಶಿವಮೊಗ್ಗ: ಸಚಿವ ಈಶ್ವರಪ್ಪನವರ ಬಹು ನಿರೀಕ್ಷಿತ ಹಾಗೂ ಜನಪರ ಕಾಳಜಿಯುಳ್ಳ ಕಾರ್ಯಕ್ರಮವಾಗಿರುವ ಆಯುರ್ವೇದಿಕ್ ಕಿಟ್ ವಿತರಣೆಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಾಲನೆ ನೀಡಲಾಯಿತು.
ಸಂಜೆ ಸುಮಾರು ೪-೩೦ರ ಸಂದರ್ಭದಲ್ಲಿ ಕೋಟೆಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಮೊದಲಿಗೆ ಶ್ರೀಸೀತಾರಾಮ ದೇವರಿಗೆ ಪೂಜೆ ಸಲ್ಲಿಸಿ ನಂತರ ಆಂಜನೇಯ ಸ್ವಾಮಿಗೆ ನಮಸ್ಕರಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನ್ ಪ್ರಧಾನ ಅರ್ಚಕರ ಮಗರಾದ ರಾಮ್ ಚರಣ್‌ಗೆ ಆಯುರ್ವೇದಿಕ್ ಕಿಟ್ ನ್ನ ಸಚಿವರು ವಿತರಿಸಿರುವುದು ವಿಶೇಷವಾ ಗಿತ್ತು. ನಂತರ ಹಿರಿಯರಾದ ನಾಗಭೂಷಣ ಭಟ್ಟರಿಗೆ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್ ನೀಡಲಾಯಿತು.
ನಂತರ ದೇವಸ್ಥಾನದ ಎದುರಿನ ಕಾಂಡಿಮೆಂಡ್ಸ್ ಗೆ, ತೆರಳಿ ಅಲ್ಲಿನ ಎ ನಿವಾಸಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಕಿಟ್‌ನ್ನ ನೀಡಲಾಯಿತು. ನಂತರ ಪುತ್ರ ಕಾಂತೇಶ್, ಪಾಲಿಕೆ ಆಡಳಿ ಪಕ್ಷದ ನಾಯಕ ಚನ್ನಬಸಪ್ಪ ಆಯುರ್ವೇದಿಕ್ ಕಿಟ್‌ನ್ನ ಹಂಚುವುದನ್ನ ಮುಂದುವರೆಸಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಅಭಿವದ್ಧಿ ಮಂಡಳಿಯ ಅಧ್ಯಕ್ಷ ಡಿ.ಎಸ್. ಅರುಣ್, ಪಾಲಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಸದಸ್ಯ ಪ್ರಭಾಕರ್ ಪ್ರಭು, ಹಿರಣಯ್ಯ ಮೆದಲಾದವರು ಉಪಸ್ಥಿತರಿದ್ದರು.