ಕೊರೋನಾ ಹಿಟ್ ಲೀಸ್ಟ್‌ನಲ್ಲಿ ರಾಜ್ಯದ ೧೦ ಜಿಗಳು..

28

ಬೆಂಗಳೂರು: ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ೧೦ ಜಿಗಳಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವುದರಿಂದ ಈ ಜಿಗಳನ್ನು ಕೊರೊನಾ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
ಬೆಂಗಳೂರು, ಶಿವಮೊಗ್ಗ, ಮಂಡ್ಯ, ಕೊಡಗು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಉಡುಪಿ ಹಾಗೂ ಹಾಸನವನ್ನು ಡೇಂಜರ್ ಜಿಗಳೆಂದು ಪರಿಗಣಿಸಲಾಗಿದೆ.
ಪಾಸಿಟಿವಿಟಿ ದರ ಶೇ.೫ರ ಗಡಿ ದಾಟಿದರೆ ಅಪಾಯ ಎಂಬುದು ತಜ್ಞರ ಅಭಿಮತ. ಇದರಂತೆ ರಾಜಧಾನಿ ಬೆಂಗಳೂರು ಪಾಸಿಟಿವಿಟಿ ದರ ಶೇ.೧೨.೭೯ರಷ್ಟಿದ್ದು ಪ್ರಥಮ ಸ್ಥಾನದಲ್ಲಿದೆ. ಮಂಡ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.೧೨.೫೬ರಷ್ಟಿದ್ದು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಕೊಡಗು- ಶೇ.೮.೨೪, ಬೆಳಗಾವಿ- ಶೇ.೮.೨೩, ಬೆಂಗಳೂರು ಗ್ರಾಮಾಂತರ -ಶೆ.೮.೧೯, ರಾಮನಗರ -ಶೆ.೭.೬೯, ಶಿವಮೊಗ್ಗ- ಶೇ.೭.೪೬, ಮೈಸೂರು-ಶೆ.೬.೭೨ ಉಡುಪಿ-ಶೇ.೫.೫೫ ಹಾಗೂ ಹಾಸನ-ಶೆ.೬.೪೪ ರಷ್ಟು ಪಾಸಿಟಿವಿಟಿ ದರ ಹೊಂದಿವೆ.
ರಾಜಧಾನಿಯ ಗಲ್ಲಿಗಲ್ಲಿಯಲ್ಲೂ ಕೊರೋನಾ ರಣಕೇಕೆ:
ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೆ ಇರುವುದರಿಂದ ಮಹಾಮಾರಿ ಗಲ್ಲಿ ಗಲ್ಲಿಗಳಿಗೂ ವ್ಯಾಪಿಸಿರುವ ಆತಂಕ ಎದುರಾಗಿದೆ. ಇಂದು ಒಂದೇ ದಿನದಲ್ಲಿ ೧೦,೮೦೦ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿರುವುದರಿಂದ ಸಮುದಾಯಕ್ಕೆ ಸೋಂಕು ಹರಡಿರುವ ಸಾಧ್ಯತೆಗಳಿವೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಕಂಟೈನ್‌ಮೆಂಟ್ ಜೋನ್‌ಗಳ ಸಂಖ್ಯೆ ೪೧೨ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಅತಿ ಹೆಚ್ಚಿನ ಕಂಟೈನ್‌ಮೆಂಟ್‌ಗಳಿರುವುದ ರಿಂದ ಈ ಎರಡು ಜೋನ್‌ಗಳು ಡೇಂಜರ್ ಜೋನ್‌ಗಳಾಗಿ ಪರಿವರ್ತನೆಗೊಂಡಿವೆ.
ಮಹದೇವಪುರದಲ್ಲಿ ೧೪೩, ಬೊಮ್ಮನಹಳ್ಳಿಯಲ್ಲಿ ಬರೊಬ್ಬರಿ ೧೦೦ ಕಂಟೈನ್‌ಮೆಂಟ್ ಜೋನ್‌ಗಳನ್ನು ರಚನೆ ಮಾಡಲಾಗಿದೆ. ಉಳಿದಂತೆ ದಕ್ಷಿಣ ವಲಯ-೪೯, ಪಶ್ಚಿಮ-೪೪, ಪೂರ್ವ-೩೩, ಯಲಹಂಕ-೩೩, ದಾಸರಹಳ್ಳಿ-೬ ಹಾಗೂ ಆರ್.ಆರ್. ನಗರದಲ್ಲಿ ೪ ಕಂಟೈನ್‌ಮೆಂಟ್ ಜೋನ್‌ಗಳಿವೆ.
ದಿನೇ ದಿನೇ ನಗರದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ೪೯ ಸಾವಿರಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ನಿನ್ನೆ ಇಬ್ಬರು ಬಲಿಯಾಗಿರುವುದರಿಂದ ಕೊರೊನಾ ಮಹಾಮಾರಿ ಮತ್ತೆ ಅಟ್ಟಹಾಸ ಮೆರೆಯುವ ಸಾಧ್ಯತೆಗಳಿವೆ ಎಂದು ತಜ್ಞರು ಗಂಭೀರ ಎಚ್ಚರಿಕೆ ನೀಡಿzರೆ.
ಮಕ್ಕಳಿಗೂ ಸೋಂಕು:
ನಿನ್ನೆ ಪತ್ತೆಯಾದ ಸೋಂಕಿತರ ಪೈಕಿ ೯ ವರ್ಷದೊಳಗಿನ ೭೪ ಮಕ್ಕಳಿದ್ದರೆ, ೧೦ ರಿಂದ ೧೯ ವರ್ಷದೊಳಗಿನ ೯೦, ೨೦ ರಿಂದ ೨೯ ವರ್ಷದೊಳಗಿನ ೮೭೮, ೩೦ ರಿಂದ ೩೯ ವರ್ಷದೊಳಗಿನ ೨೩೯೦, ೪೦ ರಿಂದ ೪೯ ವರ್ಷದೊಳಗಿನ ೧೪೬೫, ೫೦ರಿಂದ ೫೯ ವರ್ಷದೊಳಗಿನ ೯೭೨, ೬೦ ರಿಂದ ೬೯ ವರ್ಷದೊಳಗಿನ ೬೦೯ ಹಾಗೂ ೭೦ ವರ್ಷ ಮೇಲ್ಪಟ್ಟ ೩೯೨ ಮಂದಿ ಸೋಂಕಿಗೆ ಗುರಿಯಾಗಿzರೆ.

      ————————————————-
ಸುದ್ದಿ , ಜಾಹೀರಾತು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ WhatsApp : 9482482182