ಕೊರೋನಾ ವರದಿ: ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ

457

ಸಾಗರ : ಕೊರೋನಾ ತಪಾಸಣೆಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ ಎಲ್ಲರಿಗೂ ಪಾಸಿಟಿವ್ ವರದಿ ನೀಡುತ್ತಿzರೆ. ಯಾರೂ ಸರ್ಕಾರಿ ಆಸ್ಪತ್ರೆಗೆ ಹೋಗ ಬೇಡಿ ಎನ್ನುವ ಸುಳ್ಳುಸುದ್ದಿ ಹಬ್ಬಿಸುತ್ತಿರು ವುದು ಖಂಡನೀಯ ಎಂದು ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಧ್ಯಕ್ಷ ಮಾ.ಸ.ನಂಜುಂಡಸ್ವಾಮಿ ತಿಳಿಸಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಅಸೋಶಿಯೇಷನ್ ಮತ್ತು ಶಿವಮೊಗ್ಗ ಜಿ ಖಾಸಗಿ ಮೆಡಿಕಲ್ ಲ್ಯಾಬೋರೆಟರಿ ಟೆಕ್ನಾಲಾಜಿಸ್ಟ್ ಅಸೋಶಿಯೇಷನ್‌ನಿಂದ ಕೋವಿಡ್-೧೯ ಟೆಕ್ನಾಲಾಜಿಸ್ಟ್ ವಾರಿಯರ್‍ಸ್‌ಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೊರೋನಾ ವಿಷಯದಲ್ಲಿ ಪ್ರಯೋಗಶಾಲಾ ತಂತ್ರಜ್ಞರು ಸುಳ್ಳು ವರದಿಯನ್ನು ಕೊಡಲು ಬರುವುದಿಲ್ಲ. ಒಂದೊಮ್ಮೆ ಸುಳ್ಳು ವರದಿ ನೀಡಿದರೆ ಕೆಲಸ ಕಳೆದುಕೊಂಡು ಜೈಲು ಸೇರಬೇಕಾಗುತ್ತದೆ ಎನ್ನುವುದನ್ನು ಸಾರ್ವಜನಿಕರು ಮರೆಯಬಾರದು. ಕೊರೋನಾ ಸಂದರ್ಭದಲ್ಲಿ ಪ್ರಯೋಗಶಾಲಾ ತಂತ್ರಜ್ಞರು ತಮ್ಮ ಜೀವವನ್ನು ಪಣಕ್ಕಿಟ್ಟು ನಿಖರವಾದ ವರದಿಯನ್ನು ಕೊಡುವ ಪ್ರಯತ್ನ ನಡೆಸುತ್ತಿzರೆ. ಅವರ ವೃತ್ತಿಯನ್ನು ಸಂಶಯದಿಂದ ನೋಡುವುದು ಸರಿಯಲ್ಲ. ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಿದ ಪ್ರಯೋಗಶಾಲಾ ತಂತ್ರಜ್ಞರನ್ನು ಗೌರವಿಸುತ್ತಿರುವುದರಿಂದ ಅವರ ಸೇವೆಗೆ ಗೌರವ ಸಂದಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ಕೊರೋನಾ ಸಂದರ್ಭ ದಲ್ಲಿ ಪ್ರಯೋಗಶಾಲಾ ತಂತ್ರಜ್ಞರು ಹಗಲು ರಾತ್ರಿ ಕೆಲಸ ಮಾಡಿzರೆ. ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿರುವ ಪ್ರಯೋಗಶಾಲಾ ತಂತ್ರಜ್ಞರ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಎಲ್ಲ ವಿಭಾಗದ ನೌಕರರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ವೈ.ಮೋಹನ್ ಮಾತನಾಡಿ, ಯೋಗ, ಧ್ಯಾನ ಮತ್ತು ವಾಕಿಂಗ್‌ನಂತಹ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಕೊರೋನಾ ಭಯ ಇರುವುದಿಲ್ಲ. ಜೊತೆಗೆ ಮನೋಧೈರ್ಯ ಅಗತ್ಯ. ಕಾಯಿಲೆ ಬರುವುದಕ್ಕಿಂತ ಕಾಯಿಲೆ ಬಂದಿದೆ ಎಂದು ಹೆದರಿಕೊಳ್ಳುವವರ ಸಂಖ್ಯೆ ಜಸ್ತಿ ಇದೆ. ಪ್ರಯೋಗಶಾಲಾ ತಂತ್ರಜ್ಞರು ಒತ್ತಡದ ನಡುವೆ ಕೆಲಸ ಮಾಡುತ್ತಿರುವಾಗ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಸೋಶಿಯೇಷನ್ ಜಿಧ್ಯಕ್ಷ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಅಧ್ಯಕ್ಷ ರೇವಣ ಸಿದ್ದಪ್ಪ, ರತನ್ ಗುಬ್ಬಿ, ನರಸಿಂಹ ಉಪಸ್ಥಿತರಿದ್ದರು. ಪುಷ್ಪಾ ಮತ್ತು ಶರಾವತಿ ಪ್ರಾರ್ಥಿಸಿದರು. ಸಹದೇವ್ ವಂದಿಸಿದರು. ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು.