ಕೊರೋನಾ ಲಾಕ್‌ಡೌನ್: ಬೇಜವಾಬ್ದಾರಿಯಿಂದ ರಸ್ತೆಗಿಳಿದ ಜನ

431

ಶಿವಮೊಗ್ಗ: ಜುಲೈ೧೯ರ ಭಾನುವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಇದ್ದರೂ ಸಹ ನಗರದಲ್ಲಿ ಅನಗತ್ಯವಾಗಿ ಓಡಾಡುವವರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಹೀಗೆ ಅನಗತ್ಯವಾಗಿ ಓಡಾಡುವವರಿಗೆ ತುಂಗ ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ತಿರುಮಲೇಶ್ ವಿಭಿನ್ನವಾಗಿ ಖಡಕ್ ಎಚ್ಚರಿಕೆ ನೀಡಿzರೆ.
ಠಾಣಾ ವ್ಯಾಪ್ತಿಯಲ್ಲಿ ಸುಖಾ ಸುಮ್ಮನೆ ಮನೆ ಬಿಟ್ಟು ದ್ವಿಚಕ್ರವಾಹನ ದಲ್ಲಿ ಅನಗತ್ಯ ತಿರುಗುವವರಿಗೆ ಪಿಎಸ್‌ಐ ತಿರುವಲೇಶ್ ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ರಾಷ್ಟ್ರಗೀತೆ ಹೇಳಿಸಿರುವುದು ಭಾನುವಾರದ ಲಾಕ್ ಡೌನ್‌ನ ವಿಶೇಷವೂ ಹೌದು.
ರಾಷ್ಟ್ರಗೀತೆ ಹೇಳಿಸುವ ಮೂಲಕ ಅನಗ್ಯತವಾಗಿ ಓಡಾಡಬೇಡಿ ಎಂದು ಕೊರೊನ ಬಗ್ಗೆ ಜಗೃತಿ ಮೂಡಿಸಿzರೆ. ಜೋತಗೆ ಎಚ್ಚರಿಕೆಯನ್ನೂ ನೀಡಿzರೆ.
ವಿನಾಯಕ ಸರ್ಕಲ್ ಆಲ್ಕೊಳ ಸರ್ಕಲ್ ಬಳಿ ಮೈಕ್ ಅನೌನ್ಸ್ ಮೆಂಟ್ ಮಾಡಿದ ತಿರುಮಲೇಶ್ ಯಾರೂ ಕೂಡ ವಿನಾಕಾರಣ ರಸ್ತೆಗಿಳಿಯಬೇಡಿ, ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಹರಡುತ್ತಿರುವ ಮಹಾಮಾರಿಯನ್ನ ಜಗೃತಿ ಮತ್ತು ಎಚ್ಚರಿಕೆಯಿಂದ ಇರುವ ಮೂಲಕ ಓಡಿಸೋಣವೆಂದು ಹೇಳಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರಿಗಂತೂ ಅದು ತಮಾಷೆಯ ರೀತಿ ಕಾಣುತ್ತಿದೆ ಎನಿಸುತ್ತದೆ. ಕೊರೋನಾ ಸೋಂಕು ನಿತ್ಯವೂ ಹೆಚ್ಚುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾದ ಜನತೆ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಕೊರೋನಾ ಕಂಟ್ರೋಲ್ ಹೇಗೆ ಸಾಧ್ಯ?