ಕೊರೋನಾ: ರಸ್ತೆಗಿಳಿದ ಯಮ ಕಿಂಕರರು…

534

ಶಿವಮೊಗ್ಗ: ಮನೆಯಲ್ಲಿದ್ದು ನೆಮ್ಮದಿಯಾಗಿರಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯವಾಗಿರಿ ಎಂದು ಅದೆಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕೊರೋನ ವೈರಸ್ ಬಂದರೆ ಯಮ ಮತ್ತು ಕಿಂಕರರು ಮುಲಾಜಿಲ್ಲದೆ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಸಂದೇಶವುಳ್ಳ ಕಿರು ನಾಟಕದ ಪ್ರದರ್ಶನವನ್ನ ಏರ್ಪಡಿಸಿತ್ತು.
ನಗರದ ಸಮನ್ವಯ ಸಂಸ್ಥೆ, ಕಲಾಂತರಂಗದ ಸಹಕಾರದೊಂದಿನಗೆ ಈ ನಾಟಕವನ್ನು ನಗರದ ಬಸ್ ನಿಲ್ದಾಣದ ಎದುರು ಪ್ರದರ್ಶಿಸಲಾಯಿತು.
ಯಮ ಹಾಗು ಕಿಂಕರರು ಬಂದು ದ್ವಿಚಕ್ರ ವಾಹನ ಸವಾರರೀರ್ವರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲವೆಂದು ಪಾಶ ಹಾಕಿಕೊಂಡು ಯಮಲೋಕಕ್ಕೆ ಕರೆದುಕೊಂಡು ದೃಶ್ಯವನ್ನ ಪ್ರದರ್ಶಿಸಲಾಯಿತು. ಕೊರೋನ ಜಗೃತಿ ಮೂಡಿಸಲು ದ್ವಿಚಕ್ರ ವಾಹನ ಸವಾರರಿಗೆ ಸಾಲಿನಲ್ಲಿ ನಿಲ್ಲಿಸಿ ಈ ಜಗೃತಿ ನಾಟಕದ ಪ್ರದರ್ಶನ ಮಾಡಲಾಯಿತು.
ಯಮನ ಪಾತ್ರದಲ್ಲಿ ಸುಮುಖ, ಕಿಂಕರನ ಪಾತ್ರದಲ್ಲಿ ಶ್ರೀವತ್ಸ ಹಾಗೂ ಮಂಜುನಾಥ್ ನಟಿಸಿದ್ದರು. ಇವರೆಲ್ಲರು ಕಲಾಂತರಂಗದ ಕಲಾವಿದರು.
ಈ ಕುರಿತು ಮಾತನಾಡಿದ ಸಮನ್ವಯ ಕಾಶಿ ಇಂತಹ ಲಾಕ್ ಡೌನ್ ಶಿವಮೊಗ್ಗಕ್ಕೆ ಹೊಸದೇನು ಅಲ್ಲ. ನಮ್ಮ ಅಜ್ಜಿಯವರು ಈ ಹಿಂದೆ ಪ್ಲೇಗ್ ಬಂದಾಗ ಲಾಕ್ ಡೌನ್ ಆಗಿತ್ತು. ರಸ್ತೆಯ ಮೇಲೆ ಓಡಾಡಲು ಬಿಡುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಿರುತ್ತಾರೆ. ಕೊರೋನ ವೈರಸ್‌ನ್ನ ಸಾಮಾಜಿಕ ಅಂತರ ಹಾಗು ಇತರೆ ನಿಯಮಗಳನ್ನ ಪಾಲಿಸುವ ಮೂಲಕ ತಡೆಗಟ್ಟಬಹುದಾಗಿದೆ. ಸಾರ್ವಜನಿಕರ ಜಗೃತಿ ಮತ್ತು ತಾಳ್ಮೆ ಇದಕ್ಕೆ ಬಹಳ ಮುಖ್ಯ. ಈ ಜಗೃತಿ ಮುಡಿಸಲು ಸಲುವಾಗಿ ಯಮ ಕಿಂಕರರ ಕಿರುನಾಟಕ ತೋರಿಸಲಾಗಿದೆ. ನಾಳೆ ಬೆಳಿಗ್ಗೆ ಮತ್ತೆ ನಗರದ ಗೋಪಿ ಸರ್ಕಲ್‌ನಲ್ಲಿ ಇದನ್ನು ನಟಿಸಲಾಗುವುದು ಎಂದರಲ್ಲದೆ, ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.