ಕೊರೋನಾ: ಭಾರತದಲ್ಲಿ ಒಂದೇ ದಿನ ೬೨ ಬಲಿ..

548

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಹೆಮ್ಮಾರಿಯನ್ನು ನಿಗ್ರಹಿಸಲು ಕಳೆದ ಕೆಲ ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ, ವೈರಸ್ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನನಿತ್ಯ ಸಾವು ಮತ್ತು ಸೋಂಕು ಪ್ರಕರಣಗಳು ಸದ್ದಿಲ್ಲದೇ ಹೆಚ್ಚಾಗುತ್ತಲೇ ಇವೆ.
ಅಗೋಚರ ಶತ್ರು ಮಹಾಮಾರಿ ವೈರಸ್ ರಣಕೇಕೆ ಭಾರತದಲ್ಲಿ ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ೬೨ ಮಂದಿಯನ್ನು ಮಹಾಮಾರಿ ನುಂಗಿದೆ. ಅಲ್ಲದೇ ೨,೦೦೦ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕ್ಕೀಡು ಮಾಡಿದೆ.
ಭಾರತದಲ್ಲಿ ಮೃತರ ಸಂಖ್ಯೆ೧ ಸಾವಿರ ಸನಿಹಕ್ಕೆ ತಲುಪುತ್ತಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆಯೂ ಸಹ ೩೦,೦೦೦ಕ್ಕೆ ತೀರಾ ಹತ್ತಿರದಲ್ಲಿದೆ.
ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಆಂಧ್ರಪ್ರದೇಶ, ಒಡಿಶಾ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ರ್ಟ್ರ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಸಾವುಗಳು ವರದಿಯಾಗಿವೆ. ಈವರೆಗೆ ಸಂಭವಿಸಿರುವ ೯೩೪ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಒಟ್ಟು ೩೬೯ ಸಾವುಗಳು ವರದಿಯಾಗಿವೆ.
ನಂತರದ ಸ್ಥಾನಗಳಲ್ಲಿ ಗುಜರಾತ್ (೧೬೨), ಮಧ್ಯಪ್ರದೇಶ (೧೧೦), ದೆಹಲಿ (೫೪),ರಾಜಸ್ತಾನ (೪೬), ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ (ತಲಾ ೩೧), ತೆಲಂಗಾಣ(೨೬), ತಮಿಳುನಾಡು (೨೪), ಪಶ್ಚಿಮ ಬಂಗಾಳ(೨೦), ಕರ್ನಾಟಕ (೧೯),ಹಾಗೂ ಪಂಜಬ್ (೧೮) ರಾಜ್ಯಗಳಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರು,ಕೇರಳದಲ್ಲಿ ನಾಲ್ಕು, ಜರ್ಖಂಡ್ ಮತ್ತು ಹರಿಯಾಣತಲಾ ಮೂರು, ಬಿಹಾರ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತುಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.