ಕೊರೋನಾ ನಿಯಂತ್ರಣ-ಜಾಗೃತಿಗೆ ಟಾಸ್ಕ್‌ಫೋರ್ಸ್‌ನಿಂದ ಉತ್ತಮ ಕೆಲಸ ನಿರ್ವಹಣೆ: ಶಾಸಕ ಹಾಲಪ್ಪರಿಂದ ಶ್ಲಾಘನೆ

489

ಸಾಗರ: ಕೊರೋನಾ ಸಂದರ್ಭ ದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳು ತಿಳಿಸಿzರೆ. ಕೊರೋನಾ ನಿಯಂತ್ರಣ ಮತ್ತು ಸಮೂಹ ಜಗೃತಿಗಾಗಿ ರಾಜ್ಯಮಟ್ಟ ದಲ್ಲಿ ಬೇರೆಬೇರೆ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಾಗರದಲ್ಲಿಯೂ ಸಹ ಟಾಸ್ಕ್‌ಫೋರ್ಸ್‌ಗಳು ಉತ್ತಮ ಕೆಲಸ ಮಾಡುತ್ತಿವೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್- ೧೯ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದರಿಂದ ಸಾಗರ ತಾಲ್ಲೂಕಿನಲ್ಲಿ ಕೊರೋನಾ ಪ್ರಕರಣ ಕಡಿಮೆ ಇದೆ ಎಂದರು.
ಕೊರೋನಾ ಪ್ರಕರಣ ಹೆಚ್ಚುವ ಸಾಧ್ಯತೆ ಕಡಿಮೆ ಇದೆ. ಆದರೂ ನಮ್ಮ ಜಗೃತೆಯಲ್ಲಿ ನಾವಿರಬೇಕು. ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೋವಿಡ್ -೧೯ ಘಟಕ ಸ್ಥಾಪನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಗೀಸರ್ ಸೇರಿದಂತೆ ರೋಗಿಗಳಿಗೆ ಬೇಕಾದ ಸೌಲಭ್ಯಗಳನ್ನು ತಕ್ಷಣದಿಂದ ಅಳವಡಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಇದರ ಜೊತೆಗೆ ಕಂಟೋನ್ಮೆಂಟ್ ಜೋನ್‌ಗಳಲ್ಲಿ ಇರುವವರ ಬೇಕುಬೇಡಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್. ಮಾತನಾಡಿ, ಕಂಟೋನ್ಮೆಂಟ್ ಜೋನ್‌ಗಳಲ್ಲಿ ರುವವರನ್ನು ಕಾಕಾಲಕ್ಕೆ ಗಮನಿಸಲು ತಹಶೀಲ್ದಾರ್, ಪೌರಾಯುಕ್ತರ ನೇತತ್ವ ದಲ್ಲಿ ಸಮಿತಿ ರಚಿಸಲು ಸೂಚನೆ ನೀಡ ಲಾಗಿದೆ. ಇದರ ಜೊತೆಗೆ ಕೋವಿಡ್ ಹೆಲ್ತ್‌ಕೇರ್ ಸೆಂಟರ್ ಪ್ರಾರಂಭಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳ ಲಾಗಿದೆ. ಬಹುತೇಕ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ವೈರಸ್ ಪ್ರಮಾಣ ಕುಗ್ಗುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಸೋಂಕು ಸಮೂಹಕ್ಕೆ ಹರಡದಂತೆ ಜಗೃತೆ ವಹಿಸಬೇಕು ಎಂದು ಹೇಳಿದರು.
ಜೂಜಟ ಅಡ್ಡೆಯಾಗಿದೆ : ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದು ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್, ಉಪವಿಭಾಗೀಯ ಆಸ್ಪತ್ರೆಯ ಒಂದು ಭಾಗದಲ್ಲಿ ಕೆಲವರು ಅಂಬ್ಯುಲೆನ್ಸ್ ನಿಲ್ಲಿಸಿಕೊಂಡು ಮೊಬೈಲ್ ಜೂಜಟದಲ್ಲಿ ತೊಡಗಿ zರೆ. ಕಳೆದ ಎರಡು ದಿನಗಳ ಹಿಂದೆ ಈ ಗುಂಪುಗಳ ನಡುವೆ ಮಾರಾಮಾರಿ ಸಹ ನಡೆದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಅಂತಹ ಘಟನೆಗಳು ಆಸ್ಪತ್ರೆ ಆವರಣದಲ್ಲಿ ನಡೆಯುದಂತೆ ಅಗತ್ಯ ಕ್ರಮ ಜರುಗಿಸುವಂತೆ ಶಾಸಕರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಡಿ.ವೈ.ಎಸ್.ಪಿ. ವಿನಾಯಕ್ ಎಸ್. ಶೆಟ್ಟಿಗಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಬಿಇಓ ಬಿಂಬ ಕೆ.ಆರ್., ಪ್ರಕಾಶ್ ಬೋಸ್ಲೆ, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸುನೀಲ ಕುಮಾರ್, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ತುಕಾರಾಮ್ ಸಾಗರಕರ್ ಇನ್ನಿತರರು ಹಾಜರಿದ್ದರು.