ಕೊರೋನಾ ನಿಯಂತ್ರಣಕ್ಕೆ ಆತ್ಮವಿಶ್ವಾಸವೇ ಮದ್ದು…

489

ಹೊನ್ನಾಳಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಆತ್ಮವಿಶ್ವಾಸವೇ ಮದ್ದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಬಂದ ತಕ್ಷಣ ಹೆದರುವುದು ಸರಿಯಲ್ಲ. ನಾವು ಕೊರೊನಾ ವೈರಸ್‌ಗೆ ಹೆದರಿದರೆ ಅದು ನಮ್ಮ ಮೇಲೆ ಆಕ್ರಮಣ ಮಾಡುತ್ತದೆ. ನಾವು ಧೈರ್ಯದಿಂದ ಎದುರಿಸಿದರೆ, ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಂಡರೆ ಕೊರೊನಾ ವೈರಸ್ ದುರ್ಬಲಗೊಳ್ಳುತ್ತದೆ. ಆದ್ದರಿಂದ, ಎಲ್ಲರೂ ಸ್ಯಾನಿಟೈಸರ್ ಬಳಸಬೇಕು. ಮಾಸ್ಕ್‌ಗಳನ್ನು ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಸೋಂಕು ಹರಡಲು ಪ್ರಾರಂಭವಾದ ಸಮಯ ದಲ್ಲಿ ನಮ್ಮ ದೇಶದಲ್ಲಿ ಪಿಪಿಇ ಕಿಟ್ (ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್‌ಮೆಂಟ್ ಕಿಟ್) ತಯಾರಾಗುತ್ತಿ ರಲಿಲ್ಲ. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆದರೆ, ಪ್ರಧಾನಿ ಮೋದಿ ಅವರ ಪ್ರಯತ್ನದ ಫಲವಾಗಿ ಇದೀಗ, ನಮ್ಮ ದೇಶದ ಪಿಪಿಇ ಕಿಟ್‌ಗಳನ್ನು ತಯಾರಿಸಲಾ ಗುತ್ತದೆ. ಸದೃಢ ಭಾರತ ನಿರ್ಮಾಣಕ್ಕೆ ಮೋದಿ ಅವರ ಕೊಡುಗೆ ಅಪಾರ ಎಂದು ವಿವರಿಸಿದರು.
ಕುತಂತ್ರಿ ದೇಶ ಪಾಕಿಸ್ತಾನಕ್ಕೆ ಮೋದಿ ತಕ್ಕ ಪಾಠ ಕಲಿಸುತ್ತ ಬಂದಿzರೆ. ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾ ದೇಶಕ್ಕೂ ಸಮರ್ಥವಾಗಿ ಉತ್ತರ ನೀಡಿzರೆ. ಇದೀಗ, ಫ್ರಾನ್ಸ್‌ನಿಂದ ಐದು ರಫೇಲ್ ಯುದ್ಧ ವಿಮಾನಗಳನ್ನು ಆಮದು ಮಾಡಿಕೊಂಡಿದ್ದು, ಪಾಕಿಸ್ತಾನ, ಚೀನಾ ಎರಡೂ ದೇಶಗಳು ಬಾಲ ಮುದುರಿಕೊಳ್ಳುವಂತಾಗಿದೆ. ದೇಶದ ರಕ್ಷಣೆಯ ವಿಷಯದಲ್ಲಿ ಯಾರೊಂದಿಗೂ ರಾಜೀ ಪ್ರಶ್ನೆಯೇ ಇಲ್ಲ ಎಂಬುದು ಮೋದಿ ಅವರ ನಿಲುವಾಗಿದೆ ಎಂದು ತಿಳಿಸಿದರು.
ನಂತರ ಶಾಸಕಎಂ.ಪಿ. ರೇಣುಕಾಚಾರ್ಯ ಅವರು ಎಂದಿನಂತೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿದರು.