ಕೊರೋನಾ ತಡೆಗೆ ಹೆಚ್ಚು ತಪಾಸಣೆ: ಡಾ| ಸ್ಮಿತಾ

401

ಸಾಗರ : ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ಸರಪಳಿ ಯನ್ನು ಕತ್ತರಿಸಲು ಅತಿಹೆಚ್ಚು ಕೊರೋನಾ ತಪಾಸಣೆ ನಡೆಸಲಾಗು ತ್ತಿದೆ ಎಂದು ಆನಂದಪುರಂನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸ್ಮಿತಾ ತಿಳಿಸಿದರು.
ತಾಲ್ಲೂಕಿನ ಆನಂದಪುರಂನಲ್ಲಿ ಕನಕಮ್ಮಾಳ್ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಪಾಸಣೆ ವೇಳೆ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕೊರೋನಾ ಹರಡದಂತೆ ನಿಗಾವಹಿಸಲಾಗುತ್ತಿದೆ ಎಂದರು.
ಆನಂದಪುರಂ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಕೊರೋನಾ ತಪಾಸಣೆ ನಡೆಸುವ ಮೂಲಕ ಸೋಂಕು ಸಮುದಾಯಕ್ಕೆ ಹರಡದಂತೆ ನಿಗಾವಹಿಸಲಾಗುತ್ತಿದೆ. ಒಂದೊಮ್ಮೆ ಕೊರೋನಾ ಸೋಂಕು ಕಂಡು ಬಂದರೆ ಹೆದರುವ ಅಗತ್ಯವಿಲ್ಲ. ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗ ಬಹುದು. ೬೦ವರ್ಷ ಮೇಲ್ಪಟ್ಟವರು ಮತ್ತು ಬೇರೆಬೇರೆ ಕಾಯಿಲೆ ಇದ್ದವರು ಕಡ್ಡಾಯವಾಗಿ ಕೊರೋನಾ ತಪಾಸಣೆಗೆ ಒಳಪಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮುದಾಯ ಆರೊಗ್ಯ ಕೇಂದ್ರದ ಮಾರಲಿಂಗ, ಈಶ್ವರಯ್ಯ, ವಿನೋದ್, ಶೋಭಾ, ಸಬೀನ್, ಪ್ರೇಮಾ, ಜಗದೀಶ್, ಸುರೇಶ್, ಗೋಪಿ, ಜಯಪ್ಪ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.