ಕೊರೋನಾ ಗೆದ್ದ ಶಾಸಕ ರೇಣುಕಾಚಾರ್ಯ

479

ಹೊನ್ನಾಳಿ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಬುಧವಾರ ಕೊರೊನಾ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ತನ್ಮೂಲಕ ಕೊರೊನಾ ಪಾಸಿಟಿವ್ ಬಂದ ಕಾರಣಕ್ಕೆ ಕುಟುಂಬಸ್ಥರಲ್ಲಿ ಕಳೆದ ಹದಿನೈದು ದಿನಗಳಿಂದ ಉಂಟಾಗಿದ್ದ ಆತಂಕ ದೂರಾಗಿದೆ.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಪ್ರವಾಸ ಮುಗಿಸಿಕೊಂಡು ಸೆ.೨೮ರ ಸೋಮವಾರ ರಾತ್ರಿ ಬೆಂಗಳೂರಿಗೆ ತೆರಳಿದ್ದರು. ೨೯ರ ಮಂಗಳವಾರ ೧೧ನೇ ಬಾರಿಗೆ ಕೊರೊನಾ ಪರೀಕ್ಷೆಗೊಳ ಪಟ್ಟಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ವೈದ್ಯರು ೧೪ ದಿನಗಳ ಕ್ವಾರಂಟೈನ್‌ಗೆ ಸೂಚಿಸಿದ ಮೇರೆಗೆ ಬೆಂಗಳೂರಿನ ತಮ್ಮ ಮನೆಯ ಹೋಮ್ ಕ್ವಾರಂಟೈನ್‌ನಲ್ಲಿದ್ದರು.
ಎಂ.ಪಿ. ರೇಣುಕಾಚಾರ್ಯ ಶೀಘ್ರ ಕೊರೊನಾ ಗೆದ್ದು ಬರಲಿ ಎಂದು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು -ಮುಖಂಡರು ಸೆ.೨೯ರ ಮಂಗಳವಾರ ರಾತ್ರಿ ಯಿಂದಲೇ ಫೇಸ್‌ಬುಕ್, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಲತಾಣಗಳಲ್ಲಿ ಸಂದೇಶಗಳನ್ನು ಹಂಚಿಕೊಂಡಿದ್ದರು. ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು.
ಎಂ.ಪಿ. ರೇಣುಕಾಚಾರ್ಯ ಕೂಡ ತಾವು ಶಿಘ್ರವೇ ಗುಣಮುಖ ರಾಗಿ ಮತ್ತೆ ಜನಸೇವೆಯಲ್ಲಿ ತೊಡ ಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು.