ಕೊರೋನಾ ಖರ್ಚು- ಲೆಕ್ಕ ಕೊಡಿ ಯುವ ಕಾಂಗ್ರೆಸ್ಸಿಗರಿಂದ ಅಂಚೆ ಪತ್ರ ಚಳವಳಿ

457

ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಇಂದು ಕೊರೋನಾ ಖರ್ಚು- ಲೆಕ್ಕ ಕೊಡಿ ಅಂಚೆ ಪತ್ರ ಚಳವಳಿ ನಡೆಸಲಾಯಿತು.
ಕೊರೋನಾ ಮಹಾಮಾರಿ ಯಿಂದ ರಾಜ್ಯದ ಜನ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ನೀಡಬೇಕಾದ ಸರ್ಕಾರ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸಾವಿರಾರು ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿರುವುದು ರಾಜ್ಯದ ಸಚಿವರುಗಳು ನೀಡುತ್ತಿರುವ ಹೇಳಿಕೆ ಗಳಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿದ್ದು. ರಾಜ್ಯ ಸರ್ಕಾರದ ಕೊರೋನಾ ಖರ್ಚು – ಲೆಕ್ಕ ಕೊಡಿ ಅಂಚೆ ಪತ್ರ ಚಳುವಳಿಯನ್ನು ಮಾಡುವ ಮೂಲಕ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೊರೋನ ಸಂದರ್ಭದಲ್ಲಿ ಖರೀದಿ ಮಾಡಿದ ವೈದ್ಯಕೀಯ ಪರಿಕರಗಳಾದ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್, ಕೊರೋನಾ ಸೊಂಕಿತರಿಗಾಗಿ ಬಳಸುವ ಬೆಡ್‌ಗಳು, ಆಹಾರದ ಕಿಟ್ ಹಾಗೂ ಇನ್ನಿತರ ಸರ್ಜಿಕಲ್ ಪರಿಕರಗಳನ್ನು ಮಾರು ಕಟ್ಟೆಯ ಬೆಲೆಗಿಂತ ಮೂರು-ನಾಲ್ಕು ಪಟ್ಟು ಹೆಚ್ಚು ಹಣವನ್ನು ಕೊಟ್ಟು ಖರೀದಿಸುತ್ತಿದೆ ಹಾಗೂ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೊಟ್ಟಂತಹ ಆಹಾರದ ಕಿಟ್‌ಗಳಿಗೆ ಸರ್ಕಾರ ನಾವೇ ಖರೀದಿಸಿದ್ದೇವೆ ಎಂದು ಸುಳ್ಳು ಲೆಕ್ಕವನ್ನು ನೀಡುತ್ತಿದೆ ಎಂದು ಆರೋಪಿಸಿದರು.
ಹಾಗೆಯೇ ದಿನನಿತ್ಯ ಒಬ್ಬೊಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದು. ಹಾಗೂ ರಾಜ್ಯದ ಜನರಲ್ಲಿ ಅನುಮಾನ ಮೂಡಿದೆ ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಶ್ವೇತ ಪತ್ರವನ್ನು ಹೊರಡಿಸಿ ರಾಜ್ಯದ ಜನತೆಗೆ ಕರೋನ ಖರ್ಚಿನ ಲೆಕ್ಕವನ್ನು ಕೊಡಬೇಕಾಗಿ ಈ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕೆ ರಂಗನಾಥ್, ಎಂ.ಪ್ರವೀಣ್ ಕುಮಾರ್, ಎಚ್ ಪಿ ಗಿರೀಶ್ , ಟಿವಿ ರಂಜಿತ್, ಇಟಿ ನಿತಿನ್, ಬಿ ಲೋಕೇಶ್ ,ಚಂದ್ರು ಗೆಡ್ಡೆ, ತಂಗರಾಜ್, ಎಂ.ಎಲ್.ಮುರುಳಿ, ನದೀಮ್, ಮಸ್ತಾನ್, ದೇವರಾಜ್, ಜಮಿಲ್, ರಾಜೀವ್ ರಾಯ್ಕರ್ ,ಕುಮಾರ್, ಎಂ.ರಾಕೇಶ್, ಕ್ಲೆಮೆಂಟ್ ಅಭಿಷೇಕ್, ಸೂರ್ಯ, ಶ್ರೇಯಸ್, ಗಣೇಶ್ ಹಾಗೂ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.