ಕೊರೋನಾ ಕರ್ಫ್ಯೂ: ಶಿವಮೊಗ್ಗ ಸಂಪೂರ್ಣ ಸ್ಥಬ್ಧ…

509

ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶದಂತೆ ವಾರಾಂತ್ಯದ ಕರ್ಫ್ಯೂ ಶಿವಮೊಗ್ಗ ನಗರದಲ್ಲಿ ಅತ್ಯಂತ ಯಶಸ್ವಿಯಾಗಿದೆ ಇದೇ ಮೊದಲ ಬಾರಿಗೆ ಬೆಳಿಗ್ಗೆ ೧೦ ಗಂಟೆಯ ನಂತರ ಔಷಧಿ ಮತ್ತು ಹಾಲು ಅಂಗಡಿ ಹಾಗೂ ಆಸ್ಪತ್ರೆ ಬಿಟ್ಟರೆ ಉಳಿದಂತೆ ಎ ವ್ಯವಹಾರಗಳು ಸಂಪೂರ್ಣ ಬಂದ್ ಆಗಿದ್ದವು.
೧೦ ಗಂಟೆಯ ನಂತರ ಸ್ವಯಂ ಘೋಷಿತ ಬಂದ್ ವಾತಾವರಣ ಎಡೆ ಕಂಡುಬಂದಿತು. ಕೇವಲ ಮುಖ್ಯ ರಸ್ತೆಗಳಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿಯೂ ಕೂಡ ದಿನಸಿ ಅಂಗಡಿ ಸೇರಿದಂತೆ ಟೀ ಅಂಗಡಿ, ಹಣ್ಣುಗಳ ವ್ಯಾಪಾರ, ಹೂವಿನ ವ್ಯಾಪಾರ ಎಲ್ಲವೂ ಮುಚ್ಚಿದ್ದವು. ರಸ್ತೆಯಲ್ಲಿ ಜನರ ಓಡಾಟ ತುಂಬಾ ವಿರಳವಾಗಿತ್ತು. ಕೆಲವು ಖಾಸಗಿ ಬಸ್‌ಗಳು ಬೆಳಿಗ್ಗೆ ಬಿಟ್ಟರೆ ಮಧ್ಯಾಹ್ನದ ನಂತರ ಅವುಗಳ ಸಂಚಾರವು ನಿಂತಿತ್ತು. ಕೆಲವೆ ಕೆಲವು ಸರ್ಕಾರಿ ಬಸ್‌ಗಳು ಓಡಾಡಿದರೂ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು. ಆಟೋಗಳ ಸಂಚಾರ ಕಡಿಮೆಯಿತ್ತು. ಆಸ್ಪತ್ರೆ, ಕಚೇರಿ ಮತ್ತಿತರ ತುರ್ತು ಕೆಲಸಗಳಿಗೆ ಹೋಗುವವರು ಮಾತ್ರ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿತು.
ಬಹುತೇಕ ಮಂದಿ ಇಂದು ಮನೆಯಲ್ಲಿಯೇ ಇರುವುದು ಕಂಡು ಬಂದಿದೆ. ಈ ಕರ್ಫ್ಯೂ ಸೋಮವಾರ ಬೆಳಿಗ್ಗೆ ೬ ಗಂಟೆಯವರೆಗೆ ಮುಂದುವರೆಯಲಿದೆ. ಜಿಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ವಿಶೇಷವೆಂದರೆ ಪೊಲೀಸರು ಮನೆಗೆ ಹೋಗಿ ಎಂದು ಹೇಳಲು ಅವಕಾಶವಿಲ್ಲದಂತೆ ಜನರ ಓಡಾಟ ಕಡಿಮೆಯಾಗಿತ್ತು. ಆದರೂ ಪೊಲೀಸ್ ವಾಹನಗಳು ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಅನಗತ್ಯ ವಾಗಿ ಓಡಾಡುವ ಜನರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ಸಿನಿಮಾ,ಶಾಪಿಂಗ್ ಮಾಲ್, ಜಿಮ್‌ಗಳು, ಪಾರ್ಕ್ ಇವೆಲ್ಲವೂ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮದ್ಯ ಮಾರಾಟವೂ ಸಂಪೂರ್ಣವಾಗಿ ಬಂದ್ ಆಗಿತ್ತು. ಕೃಷಿ ಚಟುವಟಿಕೆ ಕೆಲಸಗಳು, ರಸ್ತೆ ಕಾಮಗಾರಿಗಳು ಕೂಡ ಕಡಿಮೆ ಯಿದ್ದವು. ಬೆಳಿಗ್ಗೆ ಒಂದಿಷ್ಟು ದಿನಸಿ, ಹಾಲಿನ ಅಂಗಡಿ, ಮಾಂಸದ ಅಂಗಡಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡಿದ್ದು ಬಿಟ್ಟರೆ ಉಳಿದಂತೆ ಅಂತಹ ಜನ ಸಂದಣಿ ಎಲ್ಲೂ ಕಂಡು ಬರಲಿಲ್ಲ. ಎಪಿಎಂಸಿ ಮಾರ್ಕೆಟ್ ಸಹಜ ವಾಗಿಯೇ ಶನಿವಾರ ರಜೆ ಇರುವುದ ರಿಂದ ಬಂದ್ ಆಗಿತ್ತು. ಅಲ್ಲಿನ ಕೆಲವು ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳು ೧೦ ಗಂಟೆಯ ವರೆಗೂ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಿದರು.
ಕೆಲವು ಕಡೆ ಮೂಲೆ ಪ್ರದೇಶಗಳಲ್ಲಿ ಗೂಡಂಗಡಿಗಳಲ್ಲಿ ಟೀ, ಕಾಫಿ, ಸಿಗರೇಟು, ಗುಟ್ಕಾಗಳ ಮಾರಾಟವಿದ್ದರೂ ಕೂಡ ಅದು ಕದ್ದುಮುಚ್ಚಿಯಾಗಿತ್ತು. ಸಂಪೂರ್ಣ ಬಾಗಿಲು ಮುಚ್ಚಿಕೊಂಡೆ ವ್ಯಾಪಾರ ಮಾಡುವುದು ಕಂಡುಬಂದಿತು. ಪೊಲೀಸ್ ಜೀಪ್ ಬಂದರೆ ತಕ್ಷಣವೇ ಬಾಗಿಲು ಹಾಕುತ್ತಿದ್ದರು. ಆದರೆ ಇಂತಹ ಅಂಗಡಿಗಳ ಸಂಖ್ಯೆ ತೀರಾ ಕಡಿಮೆಎಂದು ಹೇಳಬಹುದು. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ಗಾಂಧಿ ಬಜರ್ ಅಂತೂ ಸಂಪೂರ್ಣವಾಗಿ ಬಿಕೋ ಎನ್ನುತ್ತಿತ್ತು. ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ಕುವೆಂಪು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಆಲ್ಕೊಳ ರಸ್ತೆ, ಹಳೆ ತೀರ್ಥಹಳ್ಳಿ ರಸ್ತೆ ಸೇರಿದಂತೆ ವ್ಯಾಪಾರ ಕೇಂದ್ರಗಳೆಲ್ಲವೂ ಇವತ್ತು ಸಂಪೂರ್ಣ ಬಂದ್ ಆಗಿದ್ದವು.
ಒಟ್ಟಾರೆ ವಾರಾಂತ್ಯದ ಕರ್ಫ್ಯೂಗೆ ಜನರು, ವ್ಯಾಪಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಕೊರೋನಾದ ಭಯದಲ್ಲಿ ಜನ ಹೊರಗೆ ಬರುವುದಕ್ಕೆ ಇಷ್ಟಪಟ್ಟಿಲ್ಲ ಎನ್ನುವುದಕ್ಕೆ ಇದು ಉದಾಹರಣೆಯಾಗಿತ್ತು. ಇದರ ನಡುವೆಯೂ ಮಾಸ್ಕ್ ಇಲ್ಲದೆ ಓಡಾಡುವ ಕೆಲವರಿಗೆ ಪೊಲೀಸರು ಅಲ್ಲಲ್ಲಿ ದಂಡ ಹಾಕಿದ್ದು ಕೂಡ ಕಂಡುಬಂದಿತ್ತು.
ಈ ನಡುವೆ ನಿನ್ನೆ ಜಿಧಿಕಾರಿಗಳ ಅಂಕಿ ಅಂಶದ ಪ್ರಕಾರ ೧೭೮ ಜನರಿಗೆ ಕೊರೋನಾ ಸೋಂಕು ತಗುಲಿದೆ ಒಬ್ಬರು ಕೊರೋನಾ ಸೋಂಕಿನಿಂದ ಮತಪಟ್ಟಿzರೆ. ಇದುವರೆಗೂ ಜಿಯಲ್ಲಿ ಸುಮಾರು ೩೫೯ ಜನರು ಮತಪಟ್ಟಿದ್ದು, ಮನೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿದಂತೆ ಸುಮಾರು ೧೩೦೫ ಜನರು ಚಿಕಿತ್ಸೆ ಪಡೆಯುತ್ತಿzರೆ. ಎಂದಿನಂತೆ ಇದರಲ್ಲಿ ಯುವಕರೇ ಹೆಚ್ಚಿರುವುದು ಕಂಡುಬಂದಿದೆ. ನಿನ್ನೆ ಸುಮಾರು ೧೦ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ.