ಕೊರೋನಾ ಕರ್ಫ್ಯೂ : ನಿರ್ಗತಿಕರ ಹಸಿವು ನೀಗಿಸಿದ ಯುವ ಕಾಂಗ್ರೆಸ್ಸಿಗರು…

284

ಹೊಸ ನಾವಿಕ ನ್ಯೂಸ್ : ಶಿವಮೊಗ್ಗ ನಗರ ಉತ್ತರ ಮತ್ತು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕರೋನಾ ಕರ್ಫ್ಯೂ ನಿಮಿತ್ತ ನಗರದಲ್ಲಿ ಎ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಇಂತಹ ಸಂದರ್ಭದಲ್ಲಿ ನಗರದ ವಿವಿಧ ಭಾಗಗಳಲ್ಲಿ ಇರುವ ನಿರ್ಗತಿಕರಿಗೆ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಜಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಿ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಬಿ. ಲೋಕೇಶ್, ಎಸ್ ಕುಮರೇಶ್, ಯುವ ಕಾಂಗ್ರೆಸ್ ಮುಖಂಡರಾದ ಆರ್ ಕಿರಣ್ ಪದಾಧಿಕಾರಿಗಳಾದ ಗಗನ್ ಪವನ್, ಮಣಿ, ಪೂರ್ವಿಕ್ ಚಂದನ್ ನಿಹಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.