ಕೊರೋದಿಂದ ಮೃತಪಟ್ಟ ನೌಕರರಿಗೆ ವಿಮಾಸೌಲಭ್ಯ

504

ಶಿವಮೊಗ್ಗ: ಕರ್ತವ್ಯನಿರತ ರಾಜ್ಯ ಸರ್ಕಾರಿ ನೌಕರರು ಕೊರೋನ ಸೋಂಕಿನಿಂದ ಮೃತಪಟ್ಟಲ್ಲಿ ರಾಜ್ಯ ಸರ್ಕಾರದ ಎ ಇಲಾಖೆಗಳ ನೌಕರರಿಗೂ ಅನ್ವಯವಾಗುವಂತೆ ಪರಿಹಾರ ಮತ್ತು ವಿಮಾ ಸೌಲಭ್ಯವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ ಹಾಗೂ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಅಭಿನಂದನೆ ಸಲ್ಲಿಸಿzರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋಡ್-೧೯ ಕರ್ತವ್ಯನಿರತ ಅವಶ್ಯಕ ಇಲಾಖೆಗಳ ನೌಕರರು ಮೃತಪಟ್ಟ ಸಂದರ್ಭದಲ್ಲಿ ಮಾತ್ರ ಪರಿಹಾರ ವಿಮಾ ಮೊತ್ತವನ್ನು ನೀಡುತ್ತಿರುವುದು ಇಲಾಖೆಗಳ ನಡುವೆ ತಾರತಮ್ಯ ಮಾಡಿದಂತಾಗುತ್ತಿತ್ತು. ಅಲ್ಲದೇ ಇತ್ತೀಚೆಗೆ ಈರ್ವರು ಶಿಕ್ಷಕರು ಮೃತರಾಗಿರುವ ಬಗ್ಗೆ ಸಂಘದ ವತಿಯಿಂದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿ ಗಳಿಗೆ ಮನವಿ ಮಾಡಿ, ಸರ್ಕಾರಿ ನೌಕರರೆಲ್ಲರಿಗೂ ಏಕರೀತಿಯ ಪರಿಹಾರ ಹಾಗೂ ವಿಮಾ ಸೌಲಭ್ಯ ದೊರೆಕಿಸುವಂತೆ ಆದೇಶ ಹೊರಡಿಸಲು ಕೋರಲಾಗಿತ್ತು ಎಂದು ಸಿ.ಎಸ್. ಷಡಾಕ್ಷರಿ ಅವರು ತಿಳಿಸಿzರೆ.
ಈ ಮೊದಲು ಕೋಡ್-೧೯ ಕರ್ತವ್ಯನಿತರ ಅವಶ್ಯಕ ಇಲಾಖೆಯ ಅಧಿಕಾರಿ, ನೌಕರರು ಮತರಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರೋಗ್ಯ, ನಗರಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಗೆ ಮಾತ್ರ ವಿಮಾ ಪರಿಹಾರ ಮೊತ್ತವನ್ನು ನೀಡಲಾಗುತ್ತಿತ್ತು ಎಂದು ತಿಳಿಸಿರುವ ಅವರು, ಸೀಮಿತ ಇಲಾಖೆ ಗಳಲ್ಲದೆ ಇನ್ನೂ ಹಲವು ಇಲಾಖೆಗಳ ನೌಕರರು, ಅಧಿಕಾರಿಗಳು ಕೂಡ ಕೋಡ್ ಕರ್ತವ್ಯದಲ್ಲಿ ನಿರತರಾಗಿರು ವುದನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದವರು ತಿಳಿಸಿzರೆ.
ಇದೇ ಸಂದರ್ಭದಲ್ಲಿ ತುಮಕೂರು ಜಿ ಪಂಚಾಯಿತಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವಿರುದ್ಧ ಇರುವ ಇಲಾಖಾ ವಿಚಾರಣೆ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಮುಂದಿನ ಒಂದು ವಾರದೊಳಗಾಗಿ ಮುಂಬಡ್ತಿ ಪ್ರಕ್ರಿಯೆಯನ್ನು ಪೂರ್ಣ ಗೊಳಿಸುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದು ಕೊಳ್ಳುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿರುವುದಾಗಿ ತಿಳಿಸಿzರೆ.